ನರಿಮೊಗರು: ಬೈಕ್ ಗೆ ಜೀಪು ಡಿಕ್ಕಿ – ಬೈಕ್ ಸವಾರ ದುರ್ಮರಣ
ಪುತ್ತೂರು: ನರಿಮೊಗರುನಲ್ಲಿ ಬೈಕ್ ಗೆ ಜೀಪು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಏ.17ರಂದು ರಾತ್ರಿ ನಡೆದಿದೆ.
ಕಡ್ಯ ನಿವಾಸಿ ಲೋಕೇಶ್(46.ವ) ಮೃತಪಟ್ಟವರು. ಲೋಕೇಶ್ ತನ್ನ ಇಬ್ಬರು ಮಕ್ಕಳೊಂದಿಗೆ ಪುತ್ತೂರು ಕಡೆಯಿಂದ ತನ್ನ ಮನೆ ಕಡೆಗೆ ಹೋಗುತ್ತಿದ್ದ ವೇಳೆ ನರಿಮೊಗರಿನಲ್ಲಿ ಅಪಘಾತ ಸಂಭವಿಸಿದೆ. ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.