ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಮಂಗಳೂರು: ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿದ್ದ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. 2023ರ ಮೇ 30ರಂದು ಬಾಲಕಿಯನ್ನು ಬೆದರಿಸಿ ಆರೋಪಿಯು ಅತ್ಯಾಚಾರಗೈದು ವೀಡಿಯೊ ಮಾಡಿದ್ದ. ಈ ಬಗ್ಗೆ ಬಾಲಕಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಸಜಿಪ ನಡು ಗ್ರಾಮದ ಬಸ್ತಿಗುಡ್ಡೆ ಮನೆಯ ಮನ್ಸೂರ್ ಯಾನೆ ಮುಹಮ್ಮದ್ ಮನ್ಸೂರ್ ಯಾನೆ ಜಾಬಿರ್ ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-2 (ಪೊಕೊ) 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದ್ದಲ್ಲದೆ ಕಲಂ 506 ಐಪಿಸಿ ಪ್ರಕರಣದಲ್ಲಿ 5,000 ರೂ.ದಂಡ ಮತ್ತು 1 ವರ್ಷ ಶಿಕ್ಷೆಯನ್ನು ವಿಧಿಸಿದೆ.
ದೂರು ದಾಖಲಾದ ಬಳಿಕ ಆರೋಪಿಯು 8 ತಿಂಗಳ ಕಾಲ ತಲೆಮರೆಸಿಕೊಂಡಿದ್ದ, 2024ರ ಜುಲೈ 2ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್ ಗುರುರಾಜ್ ಭಾಗಶಃ ತನಿಖೆ ಪೂರ್ಣಗೊಳಿಸಿದ್ದು, ಮುಂದಿನ ತನಿಖೆಯನ್ನು ಇನ್‌ಸ್ಪೆಕ್ಟರ್ ರಾಜೇಂದ್ರ ಬಿ. ನಡೆಸಿ ದೋಷರೋಪಣಾ ಪಟ್ಟಿ
ನ್ಯಾಯಾಧೀಶ ಮಾನು ಕೆ.ಎಸ್. ಅವರು ಬುಧವಾರ ಆರೋಪಿಗೆ ಅತ್ಯಾಚಾರದ ಆರೋಪದಡಿ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ಹಾಗೂ ಬೆದರಿಸಿದ್ದಕ್ಕಾಗಿ 5,000 ರೂ.ದಂಡ ಮತ್ತು 1 ವರ್ಷ ಶಿಕ್ಷೆಯನ್ನು ವಿಧಿಸಿದ್ದಾರೆ. ಸರಕಾರ ಪರವಾಗಿ ಅಭಿಯೋಜಕ ಬದ್ರಿನಾಥ ಮತ್ತು ವಿಶೇಷ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.