ಅಂತಾರಾಷ್ಟ್ರೀಯರಾಜಕೀಯ

ಭಾರತದ ಆರ್ಥಿಕತೆಯನ್ನು ‘ಸತ್ತ ಆರ್ಥಿಕತೆ’ ಎಂದು ಟೀಕಿಸಿದ ಟ್ರಂಪ್

ಭಾರತದ ಎಲ್ಲಾ ಆಮದು ವಸ್ತುಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ ಕೆಲವೇ ಗಂಟೆಗಳಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ರಷ್ಯಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ತಮ್ಮ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.

ಡೊನಾಲ್ಡ್ ಟ್ರಂಪ್


ಅವರು ತಮ್ಮ ಟ್ರೂತ್ ಸೋಶಿಯಲ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿ, ಭಾರತವು ರಷ್ಯಾದೊಂದಿಗೆ ಏನು ಮಾಡುತ್ತದೆ ಎಂಬುವುದು ನನಗೆ ಮುಖ್ಯವಲ್ಲ. ರಷ್ಯಾ ಮತ್ತು ಭಾರತ ಏನು ಮಾಡಲಿವೆ ಎಂಬುದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ಎರಡೂ ರಾಷ್ಟ್ರಗಳು ತಮ್ಮ ಸತ್ತ ಆರ್ಥಿಕತೆಗಳನ್ನು ಒಟ್ಟಿಗೆ ಹೂಳಲಿ ಎಂದು ಡೊನಾಲ್ಡ್‌ ಟ್ರಂಪ್‌ ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!