ಕರಾವಳಿ

ಮಣಿಕರ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್, ಉಪಾಧ್ಯಕ್ಷರಾಗಿ ಮೋನಪ್ಪ

ದ.ಕ.ಜಿ.ಪಂ. ಹಿರಿಯ ಪ್ರಾರ್ಥಮಿಕ ಶಾಲೆ ಮಣಿಕರ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ನೂತನ ಸಮಿತಿ ರಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು
SDMC ಅಧ್ಯಕ್ಷರಾದ ಅಬ್ದುಲ್ ರಹೀಂ ವಹಿಸಿದ್ದರು. ವೇದಿಕೆಯಲ್ಲಿ ಕೊಳ್ತಿಗೆ ಗ್ರಾಮ ಪಂಚಾಯತಿನ ಸದಸ್ಯರಾದ ಶುಭಲತಾ ಜೆ ಹಾಗೂ ಸುಂದರ ಪಿ ಬಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಕೆ  ಪ್ರಾಸ್ತಾವಿಕವಾಗಿ ಮಾತನಾಡಿ SDMC ಸಮಿತಿಯ ಸಭೆ ರಚನೆಗೆ ಅನುಸರಿಸಬೇಕಾದ ಆಯ್ಕೆಯ ಮಾನದಂಡಗಳನ್ನು ಸವಿವರವಾಗಿ ಮನದಟ್ಟು ಮಾಡಿದರು. ಬಳಿಕ ಶಾಲಾ SDMC ಸಮಿತಿಯನ್ನು ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ನೆಟ್ಟಾರ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಮೋನಪ್ಪ ನಾಗನಮಜಲು ಅವರನ್ನು ಆರಿಸಲಾಯಿತು ‌. ನೂತನವಾಗಿ ಆಯ್ಕೆಗೊಂಡ SDMCಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಸಭೆಯಲ್ಲಿ ಶಾಲಾ ಶಿಕ್ಷಕ ವೃಂದ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ, ಪೋಷಕ ವೃಂದ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!