ಕರಾವಳಿ

ನಾವೂರು ವಾರ್ಡಿನಲ್ಲಿ ನೀರಿನ ಸಮಸ್ಯೆ ಹಾಗೂ ನಾವೂರು ಮುಖ್ಯರಸ್ತೆ ಕಾಂಕ್ರಿಟೀಕರಣದ ಕಾಮಗಾರಿ ಶೀಘ್ರ ಆರಂಭ: ಶರೀಫ್ ಕಂಠಿಸುಳ್ಯ ನಗರ ಪಂಚಾಯತ್ ವಾರ್ಡ್ ನಾವೂರು ಹಿಲ್ ಟಾಪ್ ಗುಡ್ಡೆಯ ಪರಿಸರದ ಜನತೆಯ ನೀರಿನ ಸಮಸ್ಯೆ ಮತ್ತು ನಾವೂರು ಮುಖ್ಯ ರಸ್ತೆಗೆ ಕಾಂಕ್ರೀಟೀಕರಣದ ಕಾಮಗಾರಿ ಶೀಘ್ರ ಆರಂಭಗೊಳ್ಳುವ ಬಗ್ಗೆ ನಗರ ಪಂಚಾಯತ್ ಅಧ್ಯಕ್ಷರು ಭರವಸೆಯನ್ನು ನೀಡಿದ್ದಾರೆ ಎಂದು ಆ ವಾರ್ಡಿನ ಸದಸ್ಯ ಶರೀಫ್ ಕಂಠಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇತ್ತೀಚೆಗೆ ನಡೆದ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಾನು ವಾರ್ಡಿನ ಸಮಸ್ಯೆಗಳ ಬಗ್ಗೆ ಮಾತನಾಡಿ ನಾವೂರು ( ಹಿಲ್ ಟಾಪ್ ) ಗುಡ್ಡೆಗೆ ಕುಡಿಯುವ ನೀರಿನ ಬಾರಿ ಸಮಸ್ಯೆ ಇದ್ದು ಕುಡಿಯುವ ನೀರು ಮಧ್ಯರಾತ್ರಿಯಲ್ಲಿ ನಲ್ಲಿಗಳಲ್ಲಿ ಬರುವುದರಿಂದ ಈ ಪರಿಸರದಲ್ಲಿರುವ ದಿನಗೂಲಿ ನೌಕರರು ನಿದ್ದೆ ಬಿಟ್ಟು ನಿರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.


ಅಲ್ಲದೇ ನಾವೂರು ಮುಖ್ಯ ರಸ್ತೆ ತೀರಾ ಹದೆಗೆಟ್ಟಿದ್ದು ಈಗಾಗಲೇ ಟೆಂಡೆರ್ ಆಗಿರುವ 20 ಲಕ್ಷ ಅನುದಾನದ ಕಾಂಕ್ರೀಟ್ ರಸ್ತೆ ಕಾಮಗಾರಿ ಬೇಗ ಆರಂಭಿಸಲು ಮನವಿ ಮಾಡಿಕೊಂಡಿದ್ದೇನೆ. ಇದಕ್ಕೆ ಸ್ಪಂದಿಸಿರುವ ಅಧ್ಯಕ್ಷರು 15 ದಿನಗಳಲ್ಲಿ ವರ್ಕ್ ಆರ್ಡರ್ ಕೊಟ್ಟು ಸಚಿವರ ಉಪಸ್ಥಿತಿಯಲ್ಲಿ ಗುದ್ದಲಿ ಪೂಜೆ ಮಾಡಿ ಕಾಮಗಾರಿ ಆರಂಭಿಸುವುದಾಗಿ, ಮತ್ತು ನಾವೂರಿನ ಹಿಲ್ ಟಾಫ್ ಗುಡ್ಡೆ ಬಳಿ ನೀರಿನ ಟ್ಯಾಂಕಿಯನ್ನು ಅಳವಡಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಶರೀಫ್ ಕಂಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!