ಸಮಾಜ ಸೇವೆಗೂ ಸೈ ಎಂದ ಪುತ್ತೂರಿನ ಬ್ರೈಟ್ ಭಾರತ್ ಸಂಸ್ಥೆ
ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯ ವತಿಯಿಂದ, ಪುತ್ತೂರಿನ ಬಿರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ವೀಲ್ ಚಯರ್ ಹಸ್ತಾಂತರ ಹಾಗೂ ಆಶ್ರಮದ ಭಿನ್ನ ಸಾಮರ್ಥ್ಯದ ರೋಗಿಗಳಿಗೆ ಸಿಹಿತಿಂಡಿ ಹಾಗೂ ಅಕ್ಕಿ ವಿತರಣಾ ಕಾರ್ಯಕ್ರಮ ಅ.28ರಂದು ಆಶ್ರಮದ ವಠಾರದಲ್ಲಿ ನಡೆಯಿತು.
ಪ್ರಜ್ಞಾ ಆಶ್ರಮಕ್ಕೆ ತೆರಳಿದ ಬ್ರೈಟ್ ಭಾರತ್ ಸಂಸ್ಥೆಯ ಪಾಲುದಾರರು, ಅಲ್ಲಿನ ಭಿನ್ನ ಸಾಮರ್ಥ್ಯದ ರೋಗಿಗಳೊಂದಿಗೆ, ಒಂದಿಷ್ಟು ಸಮಯ ಕಳೆದು, ಆಶ್ರಮಕ್ಕೆ ಬೇಕಾದ ಅಕ್ಕಿ, ವಿಲ್ ಚಯರ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಅಲಿ ಪರ್ಲಡ್ಕ, ಸಂತೋಷ್ ಗೋಳಿಕಟ್ಟೆ, ಮೂರ್ತಿ ಕಲಾವಿದರಾದ ತಾರಾನಾಥ ಆಚಾರ್ಯ, ಆಶ್ರಮದ ಮುಖ್ಯಸ್ಥರಾದ ಅಣ್ಣಪ್ಪ, ಹಾಗೂ ಅವರ ಪತ್ನಿ ಜ್ಯೋತಿ ಮತ್ತು ಬ್ರೈಟ್ ಭಾರತ್ ಸಂಸ್ಥೆಯ ಪಾಲುದಾರರು ಉಪಸ್ಥಿತರಿದ್ದರು.