ಭಕ್ತಕೋಡಿ: ಕಾರು-ಆಕ್ಟಿವಾ ನಡುವೆ ಅಪಘಾತ, ಇಬ್ಬರಿಗೆ ಗಾಯ
ಪುತ್ತೂರು: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಭಕ್ತಕೋಡಿ ಜಂಕ್ಷನ್ ನಲ್ಲಿ ಜು.21ರಂದು ರಾತ್ರಿ ನಡೆದಿದೆ.

ಪುತ್ತೂರು ಕಡೆಯಿಂದ ಸವಣೂರು ಕಡೆಗೆ ಹೋಗುತ್ತಿದ್ದ ಕಾರು ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ್ದು ಆಕ್ಟಿವಾದಲ್ಲಿದ್ದ ಸವಾರರಿಬ್ಬರು ಗಾಯಗೊಂಡಿದ್ದಾರೆ. ತಕ್ಷಣವೇ ಸ್ಥಳೀಯ ಆಟೋ ಚಾಲಕ ಪುನೀತ್ ಮತ್ತು ದೀಕ್ಷಿತ್ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ಆಕ್ಟಿವಾ ಹಾಗೂ ಕಾರಿಗೆ ಹಾನಿ ಸಂಭವಿಸಿದೆ.