ಕರಾವಳಿ

ರಸ್ತೆಯ ಬೇಡಿಕೆ ಈಡೇರಿಸದಿದ್ದರೆ ಚುನಾವಣಾ ಬಹಿಷ್ಕಾರ..!
ಕಟ್ಟತ್ತಾರು ನಿಡ್ಯಾಣದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಸ್ಥಳೀಯರು





ಪುತ್ತೂರು: ರಸ್ತೆ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿರುವ ಬ್ಯಾನರ್ ಕಟ್ಟತ್ತಾರು ಸಮೀಪದ ನಿಡ್ಯಾಣ ಎಂಬಲ್ಲಿ ಸ್ಥಳೀಯರು ಅಳವಡಿಸಿದ್ದಾರೆ.



‘ಕಟ್ಟತ್ತಾರಿನಿಂದ ನಿಡ್ಯಾಣಕ್ಕೆ ಪುರಾತನ ಕಾಲದಿಂದಲೇ ಇರುವ ಸುಮಾರು 1 ಕಿ.ಮೀ. ಮಣ್ಣುರಸ್ತೆ ಕಾಂಕ್ರೀಟೀಕರಣಕ್ಕಾಗಿ ಹಲವು ಬಾರಿ ಮನವಿ ಮಾಡಿದರೂ ಅನುದಾನ ಬಂದಾಗ ಮಾಡುತ್ತೇವೆ ಎಂಬ ಭರವಸೆ ಮಾತ್ರ ಅನೇಕ ವರ್ಷಗಳಿಂದ ಸಂಬಂಧಪಟ್ಟವರು ನೀಡುತ್ತಾ ಬಂದಿದ್ದಾರೆ. ಕೆದಂಬಾಡಿ ಹಾಗೂ ಅರಿಯಡ್ಕ ಗ್ರಾಮಕ್ಕೆ ಒಳಪಟ್ಟ ನೂರಾರು ಮನೆಗಳು ಈ ಪ್ರದೇಶದಲ್ಲಿದೆ. ಆದ್ದರಿಂದ ಸದ್ರಿ 1 ಕೀ.ಮೀ. ರಸ್ತೆ ಪೂರ್ಣವಾಗಿ ಕಾಂಕ್ರೀಟೀಕರಣವಾಗುವ ತನಕ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಠಾರ ಮಾಡಲು ತೀರ್ಮಾನಿಸಲಾಗಿದೆ’ ಎಂದು ಬರೆದಿರುವ ಬ್ಯಾನರ್ ನ್ನು ನೊಂದ ರಸ್ತೆ ಫಲಾನುಭವಿಗಳು ನಿಡ್ಯಾಣ ಹೆಸರಿನಲ್ಲಿ ಅಳವಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!