ಕರಾವಳಿ

ಆ.27: ದಾರುನ್ನಜಾತ್ 15ನೇ ವಾರ್ಷಿಕ   ಹಾಗೂ ಆಂಡ್ ನೇರ್ಚೆ: ಸುಲ್ತಾನುಲ್ ಉಲಮಾ ಘೋಷಣೆ

ವಿಟ್ಲ: ದಾರುನ್ನಜಾತ್ ಸಂಸ್ಥೆಯ 15ನೇ ವಾರ್ಷಿಕ ಹಾಗೂ ಸಂಸ್ಥೆಯ ಶಿಲ್ಪಿ ಮರ್ಹೂಮ್ ಶೈಖುನಾ ಅಬೂಬಕ್ಕರ್ ಉಸ್ತಾದ್ 6ನೇ ಆಂಡ್ ನೇರ್ಚೆಯನ್ನು ಆಗಸ್ಟ್ 27ರಂದು ನಡೆಸಲು ಖಾಝಿ ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ.ಉಸ್ತಾದ್ ದಿನಾಂಕವನ್ನು ಘೋಷಣೆ ಮಾಡಿದರು.



ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ
 ಈ ಪ್ರಯುಕ್ತ ಖಾಝಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಅವರನ್ನು ಸಂಸ್ಥೆಯ ಪದಾಧಿಕಾರಿಗಳು ಮರ್ಕಝ್ ವಿದ್ಯಾಸಂಸ್ಥೆಯಲ್ಲಿ ಭೇಟಿ ಮಾಡಿ ಕಾರ್ಯಕ್ರಮದ ವಿವರಗಳನ್ನು ನೀಡಿದರು. ಆ ಬಳಿಕ ಉಸ್ತಾದ್ ದಿನಾಂಕ ಘೋಷಣೆ ಮಾಡಿದರು. ಕಾರ್ಯಕ್ರಮದ ಯಶಸ್ವಿಗೆ ಪ್ರಾರ್ಥನೆ ನಡೆಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ, ಮಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ, ಅಬ್ದುಲ್ ಖಾದರ್ ಫೈಝಿ, ಉಮಾರ್ ವಿಟ್ಲ, ಅಬ್ದುಲ್ ಹಕೀಮ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!