ಕುಂಬ್ರ ವರ್ತಕರ ಸಂಘದ ಮುಖಂಡ ಸಂಶುದ್ದೀನ್ ಎ.ಆರ್ ಮನೆ ಮೇಲೆ ಬಿದ್ದ ತೆಂಗಿನ ಮರ!
ಪುತ್ತೂರು: ಮನೆಗೆ ತೆಂಗಿನ ಮರ ಬಿದ್ದು ಮನೆಗೆ ಹಾನಿ ಸಂಭವಿಸಿದ ಘಟನೆ ಕುಂಬ್ರ ಸಮೀಪದ ಅರಿಯಡ್ಕ ಎಂಬಲ್ಲಿ ಜು.19ರಂದು ರಾತ್ರಿ ವರದಿಯಾಗಿದೆ.

ಕುಂಬ್ರ ವರ್ತಕರ ಸಂಘದ ಮುಖಂಡ ಸಂಶುದ್ದೀನ್ ಎ.ಆರ್ ಎಂಬವರ ಮನೆಗೆ ತೆಂಗಿನ ಮರ ಬಿದ್ದಿದ್ದು, ಪರಿಣಾಮ ಸುಮಾರು 25 ಸಾವಿರ ರೂ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಮನೆಯ ಸಮೀಪದ ಮರವೊಂದು ತೆಂಗಿನ ಮರದ ಮೇಲೆ ಬಿದ್ದ ಪರಿಣಾಮ ತೆಂಗಿನ ಮರ ಮನೆ ಮೇಲೆ ಬಿದ್ದಿದ್ದು ಮನೆಯ ಮುಂಭಾಗದ ಛಾವಣಿಯ ಹಲವು ಶೀಟುಗಳು ತುಂಡಾಗಿ ಬಿದ್ದಿದೆ.