ಮಂಗಳೂರು: ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಅತಿ ಕಡಿಮೆ ದರದ ಹೆರಿಗೆ ಫ್ಯಾಕೇಜ್ ಘೋಷಣೆ
ಮಂಗಳೂರು: ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕರಾವಳಿ ಜನರಿಗೆ ಶುಭ ಸುದ್ದಿಯನ್ನು ನೀಡಿದ್ದು, ಅತಿ ಕಡಿಮೆ ದರದ ಹೆರಿಗೆ ಫ್ಯಾಕೇಜ್ ಗಳನ್ನು ಘೋಷಿಸಿದೆ.
ವಿಶೇಷ ಹೆರಿಗೆ ಫ್ಯಾಕೇಜ್ ನ್ನು ಡಾ.ಕವಿತಾ ಡಿಸೋಝಾ ಅನಾವರಣ ಮಾಡಿದ್ದಾರೆ. ಬಳಿಕ ಮಾತನಾಡಿದ ಡಾ.ಕವಿತಾ ಡಿಸೋಝಾ,
ಜನಪ್ರಿಯ ಆಸ್ಪತ್ರೆ ಇವತ್ತು ಮಹಿಳೆಯರಿಗೆ ವಿಶೇಷ ಕೊಡುಗೆ ನೀಡಿದೆ. ಇಂತಹ ಫ್ಯಾಕೇಜ್ ನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳಿ, ಹೆಸರಿನಂತೆ ಜನಪ್ರಿಯ ಆಸ್ಪತ್ರೆ ಜನರಿಗೆ ಪ್ರಿಯವಾದ ಆಸ್ಪತ್ರೆಯಾಗಿ ಹೊರಹೊಮ್ಮಲಿ ಎಂದು ಹಾರೈಸಿದ್ದಾರೆ. ಇದೇ ವೇಳೆ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರು ಮತ್ತು ಖ್ಯಾತ ವೈದ್ಯರಾದ ಡಾ.ಅಬ್ದುಲ್ ಬಶೀರ್ ವಿ.ಕೆ, ಜನಪ್ರಿಯ ಆಸ್ಪತ್ರೆಯ ಸಿಇಒ ಡಾ.ಕಿರಾಶ್ ಪರ್ತಿಪ್ಪಾಡಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ
25,000ರೂ.ಗೆ ಸಂಪೂರ್ಣವಾಗಿ ಸಹಜ ಹೆರಿಗೆ ಸೌಲಭ್ಯ ಲಭ್ಯವಾಗಲಿದೆ. ನುರಿತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಮಾಲೋಚನೆ, ಹೆರಿಗೆ ಬಳಿಕ ಆರಾಮದಾಯಕ
ಸುಸಜ್ಜಿತ ಕೊಠಡಿ ವ್ಯವಸ್ಥೆ, ತಾಯಿ ಮತ್ತು ನವಜಾತ ಶಿಶುವಿನ ಆರೈಕೆ, ಔಷಧಿಗಳು ಇದೇ ಫ್ಯಾಕೇಜ್ ನಲ್ಲಿ ಲಭ್ಯವಾಗಲಿದೆ.
ಇನ್ನು 48,000ರೂ.ಗೆ LSCS ಪ್ಯಾಕೇಜ್ ಕೂಡ ದೊರೆಯಲಿದೆ. ಈ ಫ್ಯಾಕೇಜ್ ನಲ್ಲಿ ನುರಿತ ವೈದ್ಯರಿಂದ ಸಮಾಲೋಚನೆ, ಆಪರೇಷನ್ ಥಿಯೇಟರ್, ಶಸ್ತ್ರಕ್ರಿಯೆ ಬಳಿಕ 4 ದಿನಗಳ ತಾಯಿ- ಮಗುವಿನ ಆರೈಕೆ, ಔಷಧಿಗಳು ಕೂಡ ಲಭ್ಯವಾಗಲಿದೆ.
ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ Birth and Bloom(ಬರ್ತ್ & ಬ್ಲೂಂ) ಎಂಬ ತಾಯಿ ಮತ್ತು ಮಗುವಿನ ಆರೈಕೆ ವಿಶೇಷ ಘಟಕವಿದೆ.
ಈ ಘಟಕದಲ್ಲಿ 24 ಗಂಟೆಗಳ ಕಾಲ ಸೇವೆ ಲಭ್ಯವಿರಲಿದೆ. ಸಹಜ ಹೆರಿಗೆ, ಶಸ್ತ್ರಚಿಕಿತ್ಸೆ, ಎನ್ ಐಸಿಯು ಸೌಲಭ್ಯವಿದ್ದು, ತಾಯಿ-ಮಗುವಿನ ಉತ್ತಮ ಹಾರೈಕೆಗೆಂದೆ ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಇನ್ನು ಫ್ಯಾಕೇಜ್ ಕುರಿತು ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಾವಣಿಗಾಗಿ ಕೆಳಗೆ ನೀಡಿರುವ ಆಸ್ಪತ್ರೆಯ ಅಧಿಕೃತ ಸಂಖ್ಯೆಗೆ ಸಂಪರ್ಕಿಸಬೇಕಾಗಿ ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ. ಸಂಪರ್ಕಿಸಬೇಕಾದ ಸಂಖ್ಯೆ:
ph:0824-3500786, 8105547799