ಜ್ಯೋತಿಷಿ ಭಾಸ್ಕರ ಬಲ್ಯಾಯ ನಿಧನ
ಪುತ್ತೂರು: ಜ್ಯೋತಿಷಿ ಭಾಸ್ಕರ ಬಲ್ಯಾಯ(59.ವ) ಅವರು ಜು.18ರಂದು ನಿಧನ ಹೊಂದಿದ್ದಾರೆ.

ಸರ್ವೆ ಗ್ರಾಮದ ನೆಕ್ಕಿಲು ನಿವಾಸಿಯಾಗಿದ್ದ ಭಾಸ್ಕರ ಬಲ್ಯಾಯ ಅವರು ಕಳೆದ ಹಲವು ವರ್ಷ ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದ್ದರು. ಮೃತರು ಪತ್ನಿ ಕಮಲಾಕ್ಷಿ, ಪುತ್ರರಾದ ವಿಘ್ನೇಶ, ದೀಕ್ಷಿತ್ ಹಾಗೂ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು.