ಈ ಆಟಗಾರ ತಂಡದಲ್ಲಿದ್ದರೆ ಟೀಂ ಇಂಡಿಯಾಗೆ ಫೈನಲ್ ನಲ್ಲಿ ಸೋಲೇ ಇಲ್ಲ!

ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 3ನೇ ಬಾರಿ ಟಿ20 ವಿಶ್ವಕಪ್ ಜಯಿಸಿದೆ. ಮಾತ್ರವಲ್ಲದೆ ಸತತವಾಗಿ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ವಿಶೇಷ ಎಂದರೆ ಟೀಂ ಇಂಡಿಯಾ ಫೈನಲ್ ನಲ್ಲಿ ಗೆಲ್ಲುವ ತಂಡದಲ್ಲಿ ಈ ಆಟಗಾರ ಗ್ಯಾರಂಟಿ. ಅವರು ಬೇರಾರೂ ಅಲ್ಲ ಟೀಂ ಇಂಡಿಯಾದ ಆಲ್ ರೌಂಡರ್ ಶಿವಂ ದುಬೆ.

2024ರಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತ ಎರಡನೇ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ದುಬೆ 27 ರನ್(16 ಎಸೆತ) ಚಚ್ಚಿದ್ದರು. 2025ರಲ್ಲಿ ಪಾಕಿಸ್ತಾನದ ವಿರುದ್ಧ ಫೈನಲ್ ಗೆದ್ದು ಭಾರತ ಒಂಬತ್ತನೇ ಬಾರಿ ಏಷ್ಯಾ ಕಪ್ ಗೆದ್ದುಕೊಂಡಿತ್ತು. ಇದರಲ್ಲಿ ಶಿವಂ ದುಬೆ 33 ರನ್(17 ಎಸೆತ) ಗಳಿಸಿದ್ದರು. ಇದೀಗ 2026ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 3ನೇ ಬಾರಿ ಟಿ20 ವಿಶ್ವಕಪ್ ಜಯಿಸಿದೆ. ಈ ಪಂದ್ಯದಲ್ಲಿ ದುಬೆ ಅಜೇಯ 26 ರನ್(8 ಎಸೆತ, 3 ಬೌಂಡರಿ, 2 ಸಿಕ್ಸ್) ಚಚ್ಚಿದ್ದರು.





