ಗುಜರಾತ್ ಸೇತುವೆ ಕುಸಿತಗೊಂಡು ನದಿಗೆ ಬಿದ್ದ ಐದು ವಾಹನಗಳು!
ಗುಜರಾತ್ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಸೇತುವೆ ಕುಸಿತಗೊಂಡು ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದ ಘಟನೆ ನಡೆದಿದೆ. ಇಂದು ಬೆಳಗ್ಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು.

ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನಗಳು ಕೆಳಗೆ ಬಿದ್ದಿದೆ. ವಾಹನಗಳಿಂದ ಮೂವರನ್ನು ರಕ್ಷಿಸಲಾಗಿದ್ದು ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
45 ವರ್ಷದ ಹಳೆಯ ಸೇತುವೆ ಇದಾಗಿದ್ದು ಬಹಳ ಹಿಂದಿನಿಂದಲೂ ಅಪಾಯಕಾರಿ ಸ್ಥಿತಿಯಲ್ಲಿತ್ತು ಎಂದು ವರದಿಯಾಗಿದೆ.