14ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ
ಜೈಪುರ: 14 ವರ್ಷ, 23 ದಿನಗಳ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಸೂರ್ಯವಂಶಿ ಪಾತ್ರವಾಗಿದ್ದಾರೆ.

ಅದು ಮಾತ್ರವಲ್ಲ ತಾನು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡದ ಕಿರಿಯ ಬ್ಯಾಟರ್ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ದಾಖಲೆ ಬರೆದಿದ್ದಾರೆ.
ನಾಯಕ ಸಂಜು ಸಾಮ್ಸನ್ ಗಾಯಗೊಂಡ ಹಿನ್ನೆಲೆಯಲ್ಲಿ ಲಕ್ನೋ ವಿರುದ್ಧ ಇಂಪ್ಯಾಕ್ಟ್ ಪ್ಲೇಯರ್ ಆಗಿ ಓಪನರ್ ಆಗಿ ಆಗಮಿಸಿದ ಸೂರ್ಯವಂಶಿ ಅವರು ಮೊದಲ ಓವರ್ ಎಸೆದ ಶಾರ್ದೂಲ್ ಠಾಕೂರ್ ಅವರ ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದರು.
ಈ ಪಂದ್ಯದಲ್ಲೇ ಸ್ಫೋಟಕ ಆಟ ಪ್ರದರ್ಶಿಸಿದ ಸೂರ್ಯವಂಶಿ 34 ರನ್ ರನ್ (20 ಎಸೆತ, 2 ಬೌಂಡರಿ, 3 ಸಿಕ್ಸ್) ಸಿಡಿಸಿ ಸ್ಟಂಪ್ ಔಟಾದರು. ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್ ಜೊತೆ 52 ಎಸೆತಗಳಲ್ಲಿ 85 ರನ್ ಜೊತೆಯಾಟವಾಡಿದ್ದರು.