ಖುರ್ರತುಸ್ಸಾದಾತ್ ಉರೂಸ್ ಯಶಸ್ವಿಗೊಳಿಸಲು ಪುತ್ತೂರು ಸುನ್ನೀ ಸಂಯುಕ್ತ ಜಮಾಅತ್ ಕರೆ
ಪುತ್ತೂರು: ಆದ್ಯಾತ್ಮಿಕ ನಾಯಕರೂ, ಕರ್ನಾಟಕ ಮತ್ತು ಹೊರಗಿನ ನೂರಾರು ಮೊಹಲ್ಲಾಗಳ ಖಾಝಿಗಳೂ ಆಗಿದ್ದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೊಯಮ್ಮ ತಂಙಳ್ ಕೂರತ್ ಅವರ ಒಂದನೇ ಉರೂಸ್ ಕಾರ್ಯಕ್ರಮವು
ಜೂನ್ 26 ರಿಂದ 29 ತನಕ ನಡೆಯಲಿದೆ.

ಪುತ್ತೂರು ಸಂಯುಕ್ತ ಜಮಾಅತ್ ವ್ಯಾಪ್ತಿಯ ಎಲ್ಲ ಮೊಹಲ್ಲಾ ಗಳಲ್ಲಿ ಸದರಿ ಕಾರ್ಯಕ್ರಮದ ಪ್ರಚಾರ ಮಾಡಿ ಸಾರ್ವಜನಿಕರು ನಾಲ್ಕು ದಿನಗಳ ಆದ್ಯಾತ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವಂತೆ ಮಾಡಬೇಕಾಗಿ ಹಾಗೂ ಊರೂಸ್ ನ ಸೇವಾ ಕಾರ್ಯಗಳಲ್ಲಿ ಎಲ್ಲರೂ ಸ್ವಯಂ ಸೇವಕರಾಗಿ ಪಾಲ್ಗೊಂಡು ಸಹಕರಿಸ ಬೇಕಾಗಿ ಪುತ್ತೂರು ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಡಾ ಎಮ್ಮೆಸ್ಸೆಂ. ಝೖನೀ ಕಾಮಿಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಹಾಗೂ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ