ಕರಾವಳಿ

ನ.1: ಕಾಮಧೇನು ಚಾರಿಟೇಬಲ್ ಟ್ರಸ್ಟ್ ವತಿಯಿಂದ 20ಕ್ಕೂ ಅಧಿಕ ರಿಕ್ಷಾ ನಿಲ್ದಾಣದಲ್ಲಿ ಕಾರ್ಯಕ್ರಮ: ಹಿರಿಯ ಸಾಧಕರಿಗೆ ಸನ್ಮಾನ

ಪುತ್ತೂರು: ಕಾಮಧೇನು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಿಕ್ಷಾ ಚಾಲಕ, ಮಾಲಕರಿಗೆ ರಸ ಪ್ರಶ್ನೆ ಹಾಗೂ ಸ್ಥಳದಲ್ಲೇ ಬಹುಮಾನ ವಿತರಣೆ ಮತ್ತು ಹಿರಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನ.1ರಂದು ಬೆಳಿಗ್ಗೆ ಗಂಟೆ 8:00 ರಿಂದ ಪುತ್ತೂರು ಗಾಂಧಿ ಕಟ್ಟೆ ಬಳಿ ಉದ್ಘಾಟನೆಗೊಳ್ಳಲಿದೆ.
ಸಂಜೆ 6-00 ಗಂಟೆಗೆ ವಿಟ್ಲದಲ್ಲಿ ಸಮಾರೋಪ ನಡೆಯಲಿದೆ.
20 ಕ್ಕೂ ಅಧಿಕ ರಿಕ್ಷಾ ನಿಲ್ದಾಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಕಾಮಧೇನು ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥೆ ದಿವ್ಯಾ ಪ್ರಭಾ ಗೌಡ ಚಿಲ್ತಡ್ಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!