ರಾಷ್ಟ್ರೀಯ

ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್: 3000 ರೂ ಪಾವತಿಸಿ 200 ಬಾರಿ ಟೋಲ್ ರಸ್ತೆಯಲ್ಲಿ ಪ್ರಯಾಣಿಸಿ

ದೆಹಲಿ : ಹೆದ್ದಾರಿಗಳಲ್ಲಿ ಸರಾಗವಾಗಿ ಪ್ರಯಾಣಕ್ಕಾಗಿ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್‌ನ್ನು ಪರಿಚಯಿಸುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಜೂ. 18ರಂದು ಪ್ರಕಟಿಸಿದೆ. ವಾರ್ಷಿಕ ಪಾಸ್‌ಗೆ 3,000 ರೂ. ದರವನ್ನು ನಿಗದಿಗೊಳಿಸಲಾಗಿದ್ದು, 2025 ಆ. 15ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


ಹೊಸ ನೀತಿಯಲ್ಲಿ ಟೋಲ್ ಬೂತ್‌ನಿಂದ 60 ಕಿ. ಮೀ. ವ್ಯಾಪ್ತಿಯಲ್ಲಿರುವ ವಾಹನ ಬಳಕೆದಾರರಿಗೆ ಟೋಲ್ ಪಾವತಿಯಲ್ಲಿ ಕೆಲ ವಿನಾಯಿತಿಯಿದೆ. 3,000 ರೂಪಾಯಿಯ ಪಾಸ್ ಪಡೆದುಕೊಂಡರೆ ಒಂದು ವರ್ಷ ವ್ಯಾಲಿಟಿಡಿ ಇರುತ್ತದೆ. ಒಂದು ವರ್ಷ ಅಥವಾ 200 ಟ್ರಿಪ್ ಅನ್ನು ಈ ಪಾಸ್ ಮೂಲಕ ಪಡೆಯಬಹುದು. ಇವುಗಳಲ್ಲಿ ಯಾವುದು ಮೊದಲು ಬರುತ್ತದೆಯೋ ಅಲ್ಲಿಯವರೆಗೆ ಸಿಂಧುವಾಗಿರುತ್ತದೆ. ಇದು ವಾಣಿಜ್ಯ ವಾಹನಕ್ಕೆ ಅಲ್ಲ. ಖಾಸಗಿ ವಾಹನಗಳಾದ ಕಾರು, ಜೀಪು, ವ್ಯಾನ್ ಸೇರಿದಂತೆ ವಾಣಿಜೇತರ ವಾಹನಗಳಿಗೆ ಈ ಪಾಸ್ ನೀಡಲಾಗುತ್ತದೆ.


ಹೊಸ ಪಾಸ್ ಶೀಘ್ರದಲ್ಲೇ ರಾಜ್ ಮಾರ್ಗ್ ಯಾತ್ರಾ ಆ್ಯಪ್ಲಿಕೇಶನ್, NHAI ಮತ್ತು MoRTH ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಈ ನೀತಿಯಿಂದ 60 ಕಿ.ಮೀ. ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆ ಬಗೆಹರಿಯಲಿದೆ

Leave a Reply

Your email address will not be published. Required fields are marked *

error: Content is protected !!