ಮಂಗಳೂರು: ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಸಾವು
ಮಂಗಳೂರು: ಬಹುಮಹಡಿ ಅಪಾರ್ಟ್‌ಮೆಂಟ್ ನ 12ನೇ ಮಹಡಿಯಿಂದ ಬಿದ್ದು 15 ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ರಾತ್ರಿ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕುತ್ತಾರ್ ನಲ್ಲಿ ನಡೆದಿದೆ.

ದುರಂತ ಘಟನೆಯಲ್ಲಿ ಮೃತಳನ್ನು ಹಿಬಾ (15) ಎಂದು ಗುರುತಿಸಲಾಗಿದೆ. ಕಟ್ಟಡದ 12 ನೇ ಮಹಡಿಯಲ್ಲಿ ಕುಟುಂಬವು ವಾಸಿಸುತ್ತಿತ್ತು ಎನ್ನಲಾಗಿದೆ.
ಹಿಬಾ ಖಾಸಗಿ ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.. ಬಟ್ಟೆ ಒಣಗಳು ಹಾಕುತ್ತಿದ್ದ ವೇಳೆ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.