ಕುಂಬ್ರ: ಮಾಧವ ರೈ ನಿಧನ- ವರ್ತಕರ ಸಂಘದಿಂದ ಕುಂಬ್ರ ಪೇಟೆಯಲ್ಲಿ ಅಂತಿಮ ದರ್ಶನ
ಪುತ್ತೂರು: ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ ಎಸ್ ಮಾಧವ ರೈ ಕುಂಬ್ರ ಅವರು ಮೇ.22ರಂದು ರಾತ್ರಿ ನಿಧನ ಹೊಂದಿದ್ದು ಮೇ.23ರಂದು ಬೆಳಿಗ್ಗೆ ಕುಂಬ್ರ ಕಟ್ಟೆಯ ಬಳಿ ಮೃತದೇಹದ ಸಾರ್ವಜನಿಕ ದರ್ಶನ ನಡೆಯಿತು.

ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮುಹಮ್ಮದ್ ಕೂಡುರಸ್ತೆ, ಸ್ಥಾಪಕಾಧ್ಯಕ್ಷ ಶ್ಯಾಂ ಸುಂದರ್ ರೈ ಕೊಪ್ಪಳ ಸಹಿತ ವರ್ತಕ ಸಂಘದವರು ಮಾಲಾರ್ಪಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಬಳಿಕ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಅರ್ದ ಗಂಟೆ ಬಂದ್ ಮೂಲಕ ಸಂತಾಪ ಸೂಚಿಸಿದರು. ಬಳಿಕ ಮೃತದೇಹವನ್ನು ಮನೆಗೆ ಕೊಂಡೊಯ್ಯಲಾಯಿತು. ಅಲ್ಲಿ ಅಂತಿಮ ದರ್ಶನ ನಡೆಯಿತು. ನೂರಾರು ಮಂದಿ ಭಾಗವಹಿಸಿದ್ದರು.