ಕರಾವಳಿ

ಸುಳ್ಯ: ಕಾರು ಬೈಕ್ ಅಪಘಾತ ಮೂವರಿಗೆ ಗಂಭೀರ ಗಾಯ



ಸುಳ್ಯ: ಕಾರು ಮತ್ತು ಬೈಕ್ ಮಧ್ಯೆ ಅಪಘಾತ ನಡೆದು ಬೈಕ್ ಸವಾರಿಬ್ಬರಿಗೆ ಗಂಭೀರ ಗಾಯವಾದ ಘಟನೆ ಅರಂಬೂರಿನಲ್ಲಿ ವರದಿಯಾಗಿದೆ. ಗಾಯಾಳುಗಳು ಸುಳ್ಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ಸಂದರ್ಭದಲ್ಲಿ ಪೆರಾಜೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸ್ನೀಪ್ ಬಿಲ್ಡರ್ಸ್ ನ ತಾಜುದ್ದೀನ್ ಜಟ್ಟಿಪಳ್ಳ ಮತ್ತು ಜಸೀರ್ ಅವರು ಬೈಕ್ ಸವಾರ ಮತ್ತು ಸಹ ಸವಾರನನ್ನು ಕೂಡಲೇ ತಮ್ಮ ಪಿಕಪ್ ನಲ್ಲಿ ಸುಳ್ಯ ಸರಕಾರಿ ಅಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ ಎನ್ನಲಾಗಿದೆ.


ಕಾರು ಚಾಲಕನನ್ನು ಸುಳ್ಯದ ಅಂಬ್ಯುಲೆನ್ಸ್ ಚಾಲಕ ಸಿದ್ದೀಕ್ ರವರು ಅಸ್ಪತ್ರೆಗೆ ದಾಖಲಿಸಿದ್ದಾರೆ.
ಬೈಕ್ ಸವಾರರು ಕೂಲಿ ಕಾರ್ಮಿಕರಾದ ಶಿವಪ್ಪ ಮತ್ತು ಮೈಲಾರಿ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!