ಮದರಸ ಪಬ್ಲಿಕ್ ಪರೀಕ್ಷೆ: ಈಡನ್ ಗ್ಲೋಬಲ್’ಗೆ ಶೇ.100 ಫಲಿತಾಂಶ
ಪುತ್ತೂರು: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ನಡೆಸಿದ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ನಾಲ್ಕು ವಿದ್ಯಾರ್ಥಿಗಳು 400ಕ್ಕೆ 400 ಅಂಕ ಮತ್ತು ಒಟ್ಟು ಇಪ್ಪತ್ತಾರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ಉತ್ತಮ ಸಾಧನೆಯೊಂದಿಗೆ ಮತ್ತೊಮ್ಮೆ ಶೇಕಡಾ100 ಫಲಿತಾಂಶ ಪಡೆದುಕೊಂಡಿದೆ.

ವಿದ್ಯಾರ್ಥಿಗಳಾದ ಆಯಿಷಾ ಬಿ ಹೆಚ್ 400 ಅಂಕ, ಆಯಿಷಾ ಹನ 400, ಫಾತಿಮಾ ಫಿದಾ 400, ನಯೀಮ ನಫೀಸ 400, ಉಮರ್ ಸಾದಿಕ್ 398, ಅಹ್ಮದ್ ಶಿಬ್ಲೀ ಬಿ 398, ಮುಹಮ್ಮದ್ ಶಫೀಹ್ 395, ಅಮೀನ ಇಝ್ಮ 394, ಮುಹಮ್ಮದ್ ಅರ್ಫಾಝ್ 391, ಮುಹಮ್ಮದ್ ತಾಹಿರ್ ಎನ್ ಎ 390, ಆಶಿರ್ ಅಬ್ದುಲ್ಲಾ ಮರಿಕೆ 390, ಮುಹಮ್ಮದ್ ಅಜ್ಮಲ್ 388, ಮುಹಮ್ಮದ್ ರಾಝಿನ್ ಕೆ 383, ಫಾತಿಮತ್ ಅನೂಫ 383, ಶಝ್ಮಿ ಫಾತಿಮಾ 382, ಮುಹಮ್ಮದ್ ರಾಫಿಲ್ 381, ಮುಹಮ್ಮದ್ ತಹ್ಸೀನ್ 381, ತಂಝೀಲ್ ಡಿ 379, ಮುಹಮ್ಮದ್ ಅಯಾನ್ 376, ಮುಹಮ್ಮದ್ ರಶ್ವಿನ್ 374, ಫಾತಿಮತ್ ಮುಝೈಮ 374, ಐಫ ಫಾತಿಮಾ 374, ಫಾತಿಮತ್ ಶಹೀಮ 372, ಫಾತಿಮತ್ ಸ್ವಾಬಿರ 371, ಫಾತಿಮತ್ ಐಫ ಎಸ್ ಎಮ್ 353, ಮುಹಮ್ಮದ್ ಅಸ್ಫಲ್ 294, ಮುಹಮ್ಮದ್ ಅನೀಸ್ 291, ಮುಹಮ್ಮದ್ ಜಲಾಲ್ 270 ಅಂಕ ಪಡೆದಿದ್ದಾರೆ.
ಪರೀಕ್ಷೆ ಬರೆದ ಒಟ್ಟು 29 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 3 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳನ್ನು ಆಡಳಿತ ಸಮಿತಿ, ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು.