ಪುತ್ತೂರು: ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ಮೂಲಕ ಡಯಾಲಿಸೀಸ್ ರೋಗಿಗಳಿಗೆ ಉಚಿತ ಔಷಧಿ ಕಾರ್ಡ್ ವಿತರಣೆ
ಪುತ್ತೂರಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಮಾಡಿಸುತ್ತಿರುವ 22 ರೋಗಿಗಳಿಗೆ ಪುತ್ತೂರಿನ ಬೊಳ್ವಾರಿನ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ಮೂಲಕ ಹೆಲ್ತ್ ಪ್ಲಸ್ ಮೆಡಿಕಲ್ಸ್ ದ್ರುವ ಕಾಂಪ್ಲೆಕ್ಸ್ ಬೊಳ್ವಾರ್ ಇವರ ಸಹಕಾರದಲ್ಲಿ ಅನಿವಾಸಿ ಉದ್ಯಮಿ ಕೆ.ಪಿ.ಅಬ್ದುಲ್ ಸತ್ತಾರ್ ರವರು ಆರು ತಿಂಗಳವರೆಗೆ ಸುಮಾರು ರೂ.2ಲಕ್ಷದ ಮೆಡಿಸಿನ್ ಮತ್ತು ಡಯಾಲಿಸೀಸ್ ಮಾಡಲು ಬರುವ ರೋಗಿಗೆ ಉಪಹಾರದ ವ್ಯವಸ್ಥೆ ನೀಡುವ ಸಲುವಾಗಿ ಕಾರ್ಡ್ ಮತ್ತು ಕೂಪನ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮಾಡಿದ ದಾರುಲ್ ಹಸನಿಯಾ ಸ್ಥಾಪನೆಯ ಚಯರ್ಮೇನ್ ಸೈಯ್ಯದ್ ಶರ್ಫುದ್ದೀನ್ ತಂಙಳ್ ಮಾತನಾಡಿ ಇಂತಹಾ ಕಾರ್ಯ ಪುಣ್ಯದ ಕಾರ್ಯವಾಗಿದೆ, ಅದರಲ್ಲೂ ದಾನಕ್ಕೆ ಅರ್ಹ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿ ರೋಗಿ ಆಗಿದ್ದಾನೆ,ಇದರ ಪ್ರತಿಫಲ ಇಹದಲ್ಲೂ ಪರದಲ್ಲೂ ಲಭಿಸುವುದು ಖಚಿತ, ರೋಗ ಯಾರಿಗೂ ಬೇಡವಾದದ್ದು,ಆದರೆ ರೋಗ ಬಾರದದಂತೆ ಮುಂಜಾಗ್ರತಾ ಕ್ರಮವಾಗಿ ನಮ್ಮ ಜಾಗ್ರತೆ ಪಾಲಿಸಬೇಕು.ಆರೋಗ್ಯದ ಕಾಳಜಿ ಬೇಕು, ಹೆಚ್ಚು ಹೆಚ್ಚು ಅರೋಗ್ಯದ ಮಾಹಿತಿ ಪಡೆದುಕೊಂಡಾಗ ನಾವು ಆರೋಗ್ಯವಂತರಾಗಿ ಇರಲು ಸಹಕಾರಿಯಾಗಲಿದೆ ಎಂದರು.
ಹೆಲ್ತ್ ಪ್ಲಸ್ ಮೆಡಿಕಲ್ಸ್ ನ ಅನಿವಾಸಿ ಉದ್ಯಮಿ ಕೆ.ಪಿ.ಅಬ್ದುಲ್ ಸತ್ತಾರ್ ರವರ ಈ ಕೊಡುಗೆ ಮೆಚ್ಚುವಂತದ್ದು. ವ್ಯಾಪಾರದ ಮದ್ಯೆ ಇಂತಹ ಒಂದು ಸಂಘಟನೆ ಮೂಲಕ ಸಹಕಾರ ಮಾಡುವುದರಿಂದ ಸಮಾಜದ ಬಡ ಜನರಿಗೆ ಧೈರ್ಯ ತುಂಬಿದಂತಾಗುತ್ತದೆ ಎಂದು ಹೇಳಿದರು.
ಇನ್ನೊರ್ವ ಅಥಿತಿ ಕೆ.ಪಿ. ಝಾಕೀರ್ ಹನೀಫ್ ( ಹನೀಫ್ ಹಾಜಿ ಉದಯ )ರವರು ಮಾತನಾಡಿ ಸಮಾಜದಲ್ಲಿ ವ್ಯಾಪಾರದ ಒಂದಂಶವನ್ನು ಜನರ ಕಷ್ಟಗಳಿಗೆ, ರೋಗಿಗಳಿಗೆ ಸಹಾಯ ಮಾಡುವ ಮೂಲಕ ಇಂತಹ ಮಹತ್ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಪುತ್ತೂರು ಸರಕಾರಿ ಆಸ್ಪತ್ರೆಯ ಮಾಜಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಫೀಕ್ ದರ್ಬೆ ಮಾತನಾಡಿ ಕಳೆದ ಬಾರಿ ಸುಮಾರು ಮೂರು ಲಕ್ಷಕಿಂತಲೂ ಅಧಿಕ ರೂಪಾಯಿಯ ಔಷಧಿಯನ್ನು ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ಮೂಲಕ 15 ರೋಗಿಗಳಿಗೆ ನೀಡಿದ್ದು ಸಹಕರಿಸಲು ಹೆಲ್ತ್ ಪ್ಲಸ್ ಮೆಡಿಕಲ್ಸ್ ನವರು ಮತ್ತು ಅನಿವಾಸಿ ಉದ್ಯಮಿ ಕೆ.ಪಿ ಅಬ್ದುಲ್ ಸತ್ತಾರ್ ರವರು ಕೈಜೋಡಿಸಿದ್ದು ಇದರಿಂದ ರೋಗಿಗಳು ಸಂತುಷ್ಟತೆಯನ್ನು ಕಂಡಿದ್ದಾರೆ. ಈ ನಿಟ್ಟಿನಲ್ಲಿ ಈ ಬಾರಿ ಸುಮಾರು 22 ರೋಗಿಗಳಿಗೆ ಕೆ.ಪಿ.ಅಬ್ದುಲ್ ಸತ್ತಾರ್ ರವರು ಸಹಕರಿಸಿದ್ದಾರೆ .ಇಲ್ಲಿ ಜಾತಿ ಬೇದ ಮರೆತು ಎಲ್ಲರಿಗೂ ಸಮಾನವಾಗಿ ಹಂಚಿದ್ದಾರೆ, ಇದರೊಂದಿಗೆ ಔಷಧಿ ಮಾತ್ರ ನೀಡದೆ ರೋಗಿಗಳಿಗೆ ಆಹಾರದ ಟೋಕನ್ ವ್ಯವಸ್ತೆಯನ್ನೂ ಮಾಡಿದ್ದಾರೆ.
ಕಳೆದ ಐದು ವರ್ಷದಿಂದ ಪುತ್ತೂರಿನ ಅನ್ನಜಾತ ಹೆಲ್ಪಿಂಗ್ ಸಮಿತಿಯವರು ಸುಮಾರು ಹದಿನೈದು ರೋಗಿಗಳಿಗೆ ಪ್ರತೀ ಡಯಾಲಿಸೀಸ್ ಗೆ ಬರುವಾಗ ಆಹಾರದ ವ್ಯವಸ್ತೆಯನ್ನು ಮಾಡಿದ್ದು ಶ್ಲಾಘನೀಯ ಈ ಮದ್ಯೆ ಹೆಲ್ತ್ ಪ್ಲಸ್ ಮೆಡಿಕಲ್ ನವರ ಈ ಮೆಡಿಸಿನ್ ವ್ಯವಸ್ತೆ ರೋಗಿಗಳಿಗೆ ಒಂದು ಆಶಾದಾಯಕ ಎಂದರು.
ಹೆಲ್ತ್ ಪ್ಲಸ್ ಮೆಡಿಕಲ್ಸ್ ನ ಪಾಲುದಾರರಾದ ಆಶಿಫ್ ರವರು ಮಾತನಾಡಿ ಸರಕಾರಿ ಆಸ್ಪತ್ರೆಯ ಡಯಾಲಿಸೀಸ್ ರೋಗಿಗಳಿಗೆ ಔಷಧಿಯೊಂದಿಗೆ ವಿಶೇಷ ರಿಯಾಯಿತಿ ಘೋಷಿಸುವ ಮೂಲಕ ಬಡವರ ಬಗ್ಗೆ ಇನ್ನಷ್ಟು ಕಾಳಜಿ ತೋರಿಸಿದರು.
ವೇದಿಕೆಯಲ್ಲಿ ಈ ಎಲ್ಲಾ ಸಹಕಾರಕ್ಕೆ ಶ್ರಮಿಸಿದ ಆನಿವಾಸಿ ಉದ್ಯಮಿ ಕೆ.ಪಿ.ಅಬ್ದುಲ್ ಸತ್ತಾರ್ ರವರ ತಂದೆ ವಳತ್ತಡ್ಕ ಕುಂಜೂರು ಪಂಜ ಅಹಮದ್ ಹಾಜಿ, ಹೆಲ್ತ್ ಪ್ಲಸ್ ನ ಪಾಲುದಾರ ಅಕ್ಬರ್ ಬೊಳ್ಳಾಯಿ, ಪಿ.ಎಮ್. ಇಬ್ರಾಹಿಮ್ ಕೂರ್ನಡ್ಕ , ಇಮ್ರಾನ್ ಕಲ್ಲಡ್ಕ,ನಝೀರ್ ಅಹಮದ್, ಹಸನ್ ಕೆಮ್ಮಾಯಿ ಉಪಸ್ಥಿತರಿದ್ದರು.