ಮೇ.11: ಭಾರತ್ ವೆಹಿಕಲ್ ಬಜಾರ್ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ
ಪುತ್ತೂರು: ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟದಲ್ಲಿ ಪ್ರಸಿದ್ದಿಯನ್ನು ಪಡೆದಿರುವ ನೇರಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ ವೆಹಿಕಲ್ ಬಜಾರ್ ವತಿಯಿಂದ ಸಾರ್ವಜನಿಕ ಪ್ರಯೋಜನಕ್ಕಾಗಿ ನೂತನ ಆಂಬುಲೆನ್ಸ್ ಮೇ.11ರಂದು ಲೋಕಾರ್ಪಣೆಗೊಳ್ಳಲಿದೆ.

ಸಯ್ಯದ್ ಹಂಝ ತಂಙಳ್ ಆಂಬುಲೆನ್ಸ್ ನ್ನು ಲೋಕಾರ್ಪಣೆ ಮಾಡಲಿದ್ದು ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಝೀಝ್ ದಾರಿಮಿ ಪೋನ್ಮಲ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಭಾರತ್ ವೆಹಿಕಲ್ ಬಜಾರ್ ಸಂಸ್ಥೆಯ ಮಾಲಕ ಅಶ್ರಫ್ ತಿಂಗಳಾಡಿ ತಿಳಿಸಿದ್ದಾರೆ.