ಕಾಶ್ಮೀರದ ಪಹಾರಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ರಾಜೌರಿ/ಜಮ್ಮು: ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರು ಇಂದು ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಗುಜ್ಜರ್ ಮತ್ತು ಬಕರ್ವಾಲ್‌ಗಳ ಜೊತೆಗೆ ಪಹಾರಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡಗಳಾಗಿ (ಎಸ್‌ಟಿ) ಮೀಸಲಾತಿಯನ್ನು ಶೀಘ್ರದಲ್ಲೇ ನೀಡುವುದಾಗಿ ಘೋಷಿಸಿದರು.

ಪಹಾರಿ ಜನರು ಎಸ್‌ಟಿ ಸ್ಥಾನಮಾನ ಪಡೆದರೆ, ಅದು ದೇಶದಲ್ಲಿ ಮೀಸಲಾತಿ ಪಡೆದ ಮೊದಲ ಭಾಷಾವಾರು ಸಮುದಾಯವಾಗಲಿದೆ.
ಅದಕ್ಕಾಗಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಬೇಕಿದೆ.
ರ್ಯಾಲಿಯಲ್ಲಿ ಮಾತನಾಡಿದ ಶಾ, “ಜಿಡಿ ಶರ್ಮಾ ಕಮಿಷನ್ (ಲೆಫ್ಟಿನೆಂಟ್ ಗವರ್ನರ್ ರಚಿತ) ಗುಜ್ಜರ್, ಬಕರ್ವಾಲ್ ಮತ್ತು ಪಹಾರಿ ಸಮುದಾಯಗಳಿಗೆ ಮೀಸಲಾತಿಯನ್ನು ಶಿಫಾರಸು ಮಾಡಿ ವರದಿಯನ್ನು ಕಳುಹಿಸಿದೆ. ಶೀಘ್ರದಲ್ಲೇ ಮೀಸಲಾತಿ ನೀಡಲಾಗುವುದು” ಎಂದರು.