ಕರಾವಳಿ

ಪಡೀಲ್ ಚೈತನ್ಯ ಮಿತ್ರ ವೃಂದದ ನೂತನ ಕಛೇರಿ ಉದ್ಘಾಟನೆ, ಗಾಂಧಿ ಜಯಂತಿ ಆಚರಣೆ, ಸನ್ಮಾನ ಕಾರ್ಯಕ್ರಮ

ಪುತ್ತೂರು: ಚೈತನ್ಯ ಮಿತ್ರ ವೃಂದ ಪಡೀಲ್ ಪುತ್ತೂರು ಇದರ ನೂತನ ಕಛೇರಿಯ ಉದ್ಘಾಟನೆ, ಗಾಂಧಿ ಜಯಂತಿ ಹಾಗೂ ಸನ್ಮಾನ ಕಾರ್ಯಕ್ರಮ ಅ.2 ರಂದು ನಡೆಯಿತು. ನೂತನ ಕಛೇರಿಯನ್ನು ಪುತ್ತೂರು ವಲಯ ಅರಣ್ಯ ಇಲಾಖೆಯ ನಿವೃತ್ತ ನೌಕರರಾದ ಕಿಟ್ಟಪ್ಪ ಗೌಡರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಇದರ ಮೇಲ್ವಿಚಾರಕರಾದ ಶ್ರೀಕಾಂತ್ ಪೂಜಾರಿ ಬಿರಾವುರವರು ಮಹಾತ್ಮಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ದಿಶಾ ನಾಮನಿರ್ದೇಶಿತ ಸದಸ್ಯರಾದ ರಾಮ್ ದಾಸ್ ಹಾರಾಡಿ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸ್ಥಳೀಯ ನಗರಸಭಾ ಸದಸ್ಯ ಪದ್ಮನಾಭ ನಾಯಕ್ ವಹಿಸಿದ್ದರು. ನಗರಸಭಾ ಮಾಜಿ ಅಧ್ಯಕ್ಷರಾದ ವಾಣಿ ಶ್ರೀಧರ್, ಧರ್ಮಸ್ಥಳ ಸ್ವಸಹಾಯ ಸಂಘಗಳ ಪಡೀಲ್ ಒಕ್ಕೂಟದ ಅಧ್ಯಕ್ಷರಾದ ಮೈಮುನ, ಸಂಸ್ಥೆಯ ಸದಸ್ಯರಾದ ಜಯರಾಮ ಗೌಡರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಪುರಂದರ ಪಡೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!