ಟೀಮ್ ಇಂಡಿಯಾ ಆಟಗಾರ ಕೇದಾರ್ ಜಾದವ್ ತಂದೆ ನಾಪತ್ತೆ; ದೂರು ದಾಖಲು-ಕೆಲವೇ ಗಂಟೆಗಳಲ್ಲಿ ಪತ್ತೆ
ಟೀಂ ಇಂಡಿಯಾದ ಆಟಗಾರ ಕೇದಾರ್ ಜಾಧವ್ ಅವರ ತಂದೆ ಮಹದೇವ್ ಸೋಪಾನ್ ಜಾಧವ್ ನಾಪತ್ತೆಯಾಗಿದ್ದಾರೆ ಎಂದು ಮಗ ಪೊಲೀಸರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.
ಮಾರ್ಚ್ 27 ರಂದು (ಸೋಮವಾರ) ಪುಣೆ ನಗರದ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಕೇದಾರ್ ಜಾಧವ್ ವರದಿ ಸಲ್ಲಿಸಿದ ನಂತರ, ಪೊಲೀಸರು ಆತನ 75 ವರ್ಷದ ಅವರ ತಂದೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ನಾಪತ್ತೆಯಾದ ವರದಿಯ ಪ್ರಕಾರ, ಕೇದಾರ್ ಜಾಧವ್ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರೋಡ್ ಪ್ರದೇಶದ ನಿವಾಸಿಗಳು. ಮಹದೇವ್ ಜಾಧವ್ ಮಾರ್ಚ್ 27 ರಂದು ಮುಂಜಾನಾ ಯಾರಿಗೂ ಮಾಹಿತಿ ನೀಡದೇ ಮನೆಯಿಂದ ಹೊರಹೋಗಿದ್ದಾರೆ. ಆ ಬಳಿಕ ಮನೆಗೆ ವಾಪಸಾಗಿಲ್ಲ. ಮಾಹಿತಿಯ ಪ್ರಕಾರ, ಮಹದೇವ್ ಜಾಧವ್ 5 ಅಡಿ 6 ಇಂಚು ಎತ್ತರವಿದ್ದಾರೆ. ಅವರ ಮುಖದ ಎಡಭಾಗದಲ್ಲಿ ಶಸ್ತ್ರಚಿಕಿತ್ಸೆಯ ಗುರುತು ಇದೆ. ನಾಪತ್ತೆಯಾಗುವ ಸಮಯದಲ್ಲಿ ಬಿಳಿ ಅಂಗಿ, ಬೂದು ಬಣ್ಣದ ಪ್ಯಾಂಟ್, ಕಪ್ಪು ಚಪ್ಪಲಿ ಹಾಗೂ ಸ್ವೆಟರ್ ರೀತಿಯ ಬಟ್ಟೆಯನ್ನು ಧರಿಸಿದ್ದರು ಎಂದು ತಿಳಿದ್ದಾರೆ.
ಮಹದೇವ್ ಜಾಧವ್ ಮರಾಠಿ ಮಾತನಾಡುತ್ತಾರೆ ಮತ್ತು ಅವರು ತಮ್ಮ ಬಲಗೈ ಬೆರಳುಗಳಲ್ಲಿ ಎರಡು ಚಿನ್ನದ ಉಂಗುರಗಳನ್ನು ಧರಿಸಿದ್ದರು ಎಂದು ಹೇಳಲಾಗುತ್ತದೆ.
ಪತ್ತೆ :
ಜಾಧವ್ ಅವರ ತಂದೆ ಮಹಾದೇವ್ ಜಾಧವ್ ಸೋಮವಾರ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದರು. ಇದೀಗ ನಾಪತ್ತೆಯಾಗಿ ಕೆಲವೇ ಗಂಟೆಗಳಲ್ಲಿ ಮಹಾದೇವ್ ಜಾಧವ್ ಕೊನೆಗೂ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಲಂಕಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ಸಹನೆ ನೇತೃತ್ವದ ತಂಡ ಮಹದೇವ್ ಜಾಧವ್‌ಗಾಗಿ ಹುಡುಕಾಟ ಆರಂಭಿಸಿತ್ತು. ಇದೀಗ ಕೇದಾರ್ ಜಾಧವ್, ಮುಂಡ್ವಾ ಏರಿಯಾದಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ. ಇದೀಗ ಅವರು, ತಮ್ಮ ಕುಟುಂಬ ಸೇರಿಕೊಂಡಿದ್ದಾರೆ ಎಂದು ಮುಂಡ್ವಾ ಪೊಲೀಸ್ ಠಾಣೆಯ ಹಿರಿಯ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ