ಬಂಟ್ವಾಳ: ಇನ್ಸ್ಟಾಗ್ರಾಂ ಪೇಜ್ ನಲ್ಲಿ ಕೋಮು ಪ್ರಚೋದನಕಾರಿ ಪೋಸ್ಟ್, ಪ್ರಕರಣ ದಾಖಲು
ಬಂಟ್ವಾಳ: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶಗಳು, ವಿಡಿಯೋಗಳು ರವಾನೆಯಗುತ್ತಿದ್ದು ಈಗಾಗಲೇ ಪೊಲೀಸರು ಹಲವು ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ನ on_fixed_leader ಎಂಬ ಹೆಸರಿನ ಪೇಜ್ ನಲ್ಲಿ ಧಾರ್ಮಿಕ ಭಾವನೆಗೆ ದಕ್ಕೆಯಾಗುವಂತೆ ಹಾಗೂ ಕೋಮು ಭಾವನೆಗಳನ್ನು ಕೆರಳಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತಹ ಪೋಸ್ಟ್ ಗಳನ್ನು ಪ್ರಸಾರ ಮಾಡಿರುವ. ಬಗ್ಗೆ ಮೇ.4ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರ ನಂಬ್ರ : 46/2025 ಕಲಂ;196(1)(c), 353(2) BNS ರಂತೆ ಪ್ರಕರಣ ದಾಖಲಾಗಿದೆ.