ಟಿ20 ಕ್ರಿಕೆಟ್: ದಾಖಲೆಗಳ ಸರದಾರ ಕಿಂಗ್ ಕೊಹ್ಲಿಯಿಂದ ಮತ್ತೊಂದು ದಾಖಲೆ
ಟಿ20 ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2025 ರ 28ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಅರ್ಧ ಶತಕ ಗಳಿಸುವ ಮೂಲಕ ಟಿ 20 ಪಂದ್ಯದಲ್ಲಿ
100 ಅರ್ಧಶತಕಗಳನ್ನು ಪೂರೈಸಿದ ದಾಖಲೆಯನ್ನು ನಿರ್ಮಿಸಿದರು.
ಟಿ20ಯಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಮೊದಲ ಆಟಗಾರ ಡೇವಿಡ್ ವಾರ್ನರ್. ಅವರು ಇಲ್ಲಿಯವರೆಗೆ 108 ಅರ್ಧಶತಕಗಳನ್ನು ಗಳಿಸಿದ್ದಾರೆ. ಇವರಲ್ಲದೆ, ವಿರಾಟ್ ಕೊಹ್ಲಿ ಈಗ 100 ಅರ್ಧಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಬಾಬರ್ ಆಝಂ ಇದ್ದು, ಅವರು ಇಲ್ಲಿಯವರೆಗೆ 90 ಅರ್ಧಶತಕಗಳನ್ನು ಗಳಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಜೋಸ್ ಬಟ್ಲರ್ ಅವರ ಹೆಸರಿನಲ್ಲಿ 86 ಅರ್ಧಶತಕಗಳಿವೆ.