ರಂಝಾನ್: ಮನೆ, ಮನ ಸತ್ಕರ್ಮಗಳಿಂದ ಪ್ರಜ್ವಲಿಸಲಿ
ವಿಶುದ್ದ ರಂಝಾನ್ ತಿಂಗಳು ಮತ್ತೊಮ್ಮೆ ಆಗಮನವಾಗಿದೆ. ಪುಣ್ಯ ರಂಝಾನ್ ತಿಂಗಳು ನಮ್ಮೆಲ್ಲರ ಹೃದಯಗಳು ಶುದ್ದಿಗೊಳ್ಳಲಿ, ಮನೆಗಳು ಇಬಾದತ್‌ಗಳಿಂದ ಪ್ರಜ್ವಲಿಸಲಿ ಮತ್ತು ನಮ್ಮೆಲ್ಲರ ಜೀವನ ಶಾಂತಿ, ಸಮಾಧಾನದಿಂದ ಕೂಡಿರಲಿ ಎಂದು ಪ್ರಾರ್ಥಿಸುತ್ತೇನೆ.

ಇದು ಪ್ರಾಯಶ್ಚಿತಪಟ್ಟು ಅಲ್ಲಾಹನಲ್ಲಿ ಕ್ಷಮೆಯನ್ನು ಕೋರುತ್ತಾ ನಮ್ಮನ್ನು ನಾವು ಪರಿಶುದ್ದತೆಯೆಡೆಗೆ ಕೊಂಡೊಯ್ಯುವ ಸಮಯ.
ರಂಜಾನ್ ತಿಂಗಳಿನಲ್ಲಿ ನಮ್ಮ ಮನಸ್ಸು ಮತ್ತು ಹೃದಯವನ್ನು ಶುದ್ದೀಕರಿಸುವುದಕ್ಕಾಗಿ ಹೆಚ್ಚು ಇಬಾದತ್ ಮಾಡಬೇಕು. ನಮಾಜು, ಖುರ್ ಆನ್ ಪಾರಾಯಣ, ದಿಕ್ರ್, ಸ್ವಲಾತ್, ಸತ್ಕರ್ಮಗಳನ್ನು ಅಧಿಕಗೊಳಿಸಬೇಕು. ಒಳಿತಿಗೆ ದುಪ್ಪಟ್ಟು ಪ್ರತಿಫಲ ಸಿಗುವ ಈ ಮಾಸದ ಸಂಪೂರ್ಣ ಲಾಭವನ್ನು ನಾವು ಪಡೆಯದೆ ಹೋದರೆ ನಮಗಿಂತ ನತದೃಷ್ಟರು ಯಾರೂ ಇಲ್ಲ.
ನಮ್ಮ ಉಪವಾಸ ಸತ್ಕರ್ಮ ಮತ್ತು ಪ್ರಾರ್ಥನೆಯನ್ನು ಸರ್ವ ಶಕ್ತನಾದ ಅಲ್ಲಾಹು ಸ್ವೀಕರಿಸಿ ನಮ್ಮನ್ನು ಕ್ಷಮಿಸಲಿ, ಅಲ್ಲಾಹನು ಅಸಂಖ್ಯಾತ ಅನುಗ್ರಹಗಳನ್ನು ನಮ್ಮ ಮೇಲೆ ಧಾರೆಯೆರೆಯಲಿ ಎಂದು ಪ್ರಾರ್ಥಿಸುತ್ತಾ ಸರ್ವರಿಗೂ ರಂಝಾನ್ ಮುಬಾರಕ್ -ಅಮ್ಜದ್ ಖಾನ್ ಪೋಳ್ಯ
ದಮ್ಮಾಮ್, ಸೌದಿ ಅರೇಬಿಯಾ