ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಾಲ್ವರು ಫಲಾನುಭವಿಗಳಿಗೆ 3 ಲಕ್ಷದ 77 ಸಾವಿರ ರೂ ಪರಿಹಾರ ಚೆಕ್ ವಿತರಣೆ
ಮತ್ತೂರು: ಶಾಸಕರಾದ ಅಶೋಕ್ ರೈ ಅವರ ಶಿಫಾರಸಿನ ಮೇರೆಗೆ ನಾಲ್ವರು ಫಲಾನುಭವಿಗಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು 3 ಲಕ್ಷದ 77ಸಾ ವಿರ ರೂ ಪರಿಹಾರ ಧನ ಮಂಜೂರಾಗಿದೆ.

ಆಯಾಪು ಗ್ರಾಮದ ದೊಡ್ಡಡ್ಕ ಸುರೇಶ್ ನಾಯ್ಕರವರಿಗೆ 1,42000, ನೆಟ್ಟಣಿಗೆ ಮುಡೂರು ಗ್ರಾಮದ ಗುಂಡ್ಯ ಅಬ್ದುಲ್ಲ ಕುಂಞಿ ಎಂಬವರಿಗೆ 150000, ಪಡೂರು ಗ್ರಾಮದ ಶಾಂತಿನಗರ ಕಿರಣ್ ಕುಮಾರ್ ಪಿ ಎಂಬವರಿಗೆ 35000, ಕೊಡಿಪ್ಪಾಡಿ ಗ್ರಾಮದ ಮಾರುಗಿರಿ ಯೂಸುಫ್ ಮದನಿರವರಿಗೆ 20,000 ರೂ ಪರಿಹಾರಧನ ಮಂಜೂರಾಗಿದೆ. ಪರಿಹಾರ ಮೊತ್ತದ ಆದೇಶ ಪತ್ರವನ್ನು ಶಾಸಕರಿಂದ ಅಶೋಕ್ ರೈ ಅವರು ವಿತರಣೆ ಮಾಡಿದರು