ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಂಡ ಬಳಿಕದ ಮೊದಲ ಹೆಜ್ಜೆ – ಮಾ.23ರಂದು ಅಧಿಕಾರಿಗಳ ಭೇಟಿ
ಪುತ್ತೂರು: ಶಾಸಕ ಅಶೋಕ್ ರೈ ಅವರ ನಿರಂತರ ಶ್ರಮದ ಫಲವಾಗಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾಗಿರುಗೊಂಡಿದ್ದು
ಮೆಡಿಕಲ್ ಕಾಲೇಜು ನಿರ್ಮಾಣದ ಮೊದಲ ಹೆಜ್ಜೆ ಎಂಬಂತೆ ನಾಳೆ ಮಾ.23ರಂದು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಮೆಡಿಕಲ್ ಕಾಲೇಜಿಗೆ ಗುರುತಿಸಲಾಗಿರುವ ಸೇಡಿಯಾಪುಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪ್ರಮುಖ ಇಂಜಿನಿಯರ್ ಗಳು ಸೇರಿದಂತೆ ಹಲವರು ಭೇಟಿ ನೀಡಲಿದ್ದಾರೆ.

ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಅಲ್ಲೇ ಸಭೆಯನ್ನು ಕೂಡಾ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.