ರಾಷ್ಟ್ರೀಯ

ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಜಾಹೀರಾತಿನಿಂದ ದೂರವಿರಿ: ಮಾಧ್ಯಮಗಳಿಗೆ ಐಬಿ ಸಚಿವಾಲಯ ಸಲಹೆ

ಹೊಸದಿಲ್ಲಿ: ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಜಾಹೀರಾತಿನಿಂದ ದೂರವಿರಿ ಎಂದು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳಿಗೆ  ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಲಹೆ ನೀಡಿದೆ

ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಸೋಮವಾರ ಡಿಜಿಟಲ್ ಪಬ್ಲಿಷರ್, OTT ಪ್ಲಾಟ್‌ಫಾರ್ಮ್‌ಗಳು ಮತ್ತು ಖಾಸಗಿ ಉಪಗ್ರಹ ದೂರದರ್ಶನ ಚಾನೆಲ್‌ಗಳಿಗೆ ಸಲಹೆಗಳನ್ನು ನೀಡಿದ್ದು, ಆನ್‌ಲೈನ್ ಬೆಟ್ಟಿಂಗ್ (Online Betting) ಪ್ಲಾಟ್‌ಫಾರ್ಮ್‌ಗಳ ಜಾಹೀರಾತುಗಳನ್ನು ಪ್ರಕಟಿಸುವುದನ್ನು ತಡೆಯುವಂತೆ ಕೇಳಿದೆ.

ಕೆಲವು ಡಿಜಿಟಲ್ ನ್ಯೂಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಚಾರ ಮತ್ತು ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಜಾಹೀರಾತುಗಳು ಇನ್ನೂ ಗೋಚರಿಸುವುದನ್ನು ಗಮನಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಲಹೆಯಲ್ಲಿ ತಿಳಿಸಿದೆ.

ಕೆಲವು ಆನ್‌ಲೈನ್ ಆಫ್‌ಶೋರ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳು ಡಿಜಿಟಲ್ ಮಾಧ್ಯಮದಲ್ಲಿ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಜಾಹೀರಾತು ಮಾಡಲು ಸುದ್ದಿ ವೆಬ್‌ಸೈಟ್‌ಗಳನ್ನು ಬಾಡಿಗೆ ಉತ್ಪನ್ನವಾಗಿ ಬಳಸಲು ಪ್ರಾರಂಭಿಸಿವೆ ಎಂದು ಸರ್ಕಾರ ಹೇಳಿದೆ.

ಭಾರತದ ಹೆಚ್ಚಿನ ಭಾಗಗಳಲ್ಲಿ ಬೆಟ್ಟಿಂಗ್ ಮತ್ತು ಜೂಜಾಟವು ಕಾನೂನುಬಾಹಿರ ಚಟುವಟಿಕೆಯಾಗಿದೆ ಎಂದು ಪುನರುಚ್ಚರಿಸಿದ ಸಚಿವಾಲಯ, ಆನ್‌ಲೈನ್ ಆಫ್‌ಶೋರ್ ಬೆಟ್ಟಿಂಗ್ ಮತ್ತು ಜೂಜು ಫ್ಲಾಟ್​ಫಾರ್ಮ್ ಜಾಹೀರಾತುಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!