ನಾಳೆ ಪುತ್ತೂರಿನಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅದ್ದೂರಿ ಸ್ವಾಗತ, ಬೃಹತ್ ವಾಹನ ಜಾಥ
ಪುತ್ತೂರು: ಪುತ್ತೂರಿಗೆ ಮೆಡಿಕಲ್ ಕಾಲೇಜ್ ಷೋಷಣೆ ಆಗಿರುವ ಹಿನ್ನಲೆಯಲ್ಲಿ ಇದಕ್ಕಾಗಿ ಅವಿರತ ಪ್ರಯತ್ನ ಪಟ್ಟ ಶಾಸಕ ಅಶೋಕ್ ಕುಮಾರ್ ರೈ ಯವರಿಗೆ ಪುತ್ತೂರಿನಲ್ಲಿ ಅದ್ದೂರಿ ಸ್ವಾಗತ ಮತ್ತು ವಾಹನ ಜಾಥ ಮತ್ತು ಭವ್ಯ ಮೆರವಣಿಗೆ ಮತ್ತು ಶಾಸಕರಿಂದ ಧಾರ್ಮಿಕ ಕೇಂದ್ರಕ್ಕೆ ಭೇಟಿ ಕಾರ್ಯಕ್ರಮ ಮಾ.8ರಂದು ನಡೆಯಲಿದೆ.

ಬೆಳಗ್ಗೆ 9:30 ಕ್ಕೆ ಪುತ್ತೂರಿನ ಕಬಕದಿಂದ ಬೊಳ್ವಾರಿನ ವರೆಗೆ ಬೃಹತ್ ವಾಹನ ಜಾಥವು ನಡೆಯಲಿದ್ದು ನಂತರ ಬೊಳ್ವಾರಿನಿಂದ ಮಹಾಲಿಂಗೇಶ್ವರ ದೇವಸ್ಥಾನದ ವರೆಗೆ ಬೃಹತ್ ಮೆರವಣೆಗೆಯ ಮೂಲಕ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ ಅಶೋಕ್ ಕುಮಾರ್ ಯವರಿಗೆ ಅದ್ದೂರಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ನಂತರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಮಾಯಿದೇ ದೇವುಸ್ ಚರ್ಚ್ ಮತ್ತು ಪುತ್ತೂರು ಮಸೀದಿಗೆ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ, ಜಿಲ್ಲಾ ಕಾಂಗ್ರೆಸ್ ಮುಖಂಡರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಲಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮುಂಚೂಣಿ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ,ಜನಪ್ರತಿನಿಧಿಗಳು,ನಾಮನಿರ್ದೇಶಿತ ಸದಸ್ಯರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ತಿಳಿಸಿದ್ದಾರೆ.