ಈಡನ್ ಗ್ಲೋಬಲ್ ಶಾಲೆಯಲ್ಲಿ ಅಲಿಫ್ ಡೇ ಆಚರಣೆ
ಪುತ್ತೂರು: ಈಡನ್ ಗ್ಲೋಬಲ್ ಶಾಲೆಯ 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಕಿಂಡರ್ ಗಾರ್ಟನ್ ಮತ್ತು ಝಹೃತುಲ್ ಕುರ್ ಆನ್ ವಿಭಾಗದ ಪುಟಾಣಿಗಳನ್ನು ಅದ್ದೂರಿಯಿಂದ ಶಾಲೆಗೆ ಸ್ವಾಗತಿಸಲಾಯಿತು.
ಮಕ್ಕಳ ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಪುಟ್ಟ ಮಕ್ಕಳ ಮೊದಲ ದಿನವನ್ನು ಅಲಿಫ್ ಡೇ ಎಂಬ ಶೀರ್ಷಿಕೆಯಿಂದ ಸಂಕೇತಿಸಲಾಯಿತು.ಶಾಲೆಯ ಶಿಕ್ಷಕಿಯಾದ ಕುಮಾರಿ ಅಫ್ರೀನ್ ಬಾನು ಅತಿಥಿಗಳನ್ನು ಮತ್ತು ಮಕ್ಕಳ ಪೋಷಕರರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.ನಂತರ ಕಾರ್ಯಕ್ರಮದ ಅಧ್ಯಕ್ಷರಾದ ಬಶೀರ್ ಹಾಜಿ ಅಧ್ಯಕ್ಷೀಯ ಭಾಷಣ ಗೈದರು.ಶಾಲೆಯ ಪ್ರಾಂಶುಪಾಲರಾದ ರಂಝೀ ಮುಹಮ್ಮದ್ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.
ಕಿಂಡರ್ ಗಾರ್ಟನ್ ಕಾರ್ಡಿನೇಟರ್ ಆದ ಶ್ರುತಿ ತಮ್ಮ ಭಾಷಣದಲ್ಲಿ ಮಕ್ಕಳ ಶೈಕ್ಷಣಿಕ ವರ್ಷದ ವಿವರಗಳನ್ನು ನೀಡಿದರು.ತರಗತಿ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ತಮ್ಮ ತರಗತಿ ಮತ್ತು ತಮ್ಮನ್ನು ಪರಿಚಯಿಸಿಕೊಂಡರು.ಕಾರ್ಯಕ್ರಮದ ಮುಖ್ಯ ಅಂಗವಾಗಿ ಎಲ್ಲಾ ಮಕ್ಕಳಿಗೆ ಅಲಿಫ್ ಅಕ್ಷರ ಬರೆಸುವ ಮೂಲಕ ತರಗತಿಗೆ ಪ್ರವೇಶ ನೀಡಲಾಯಿತು.ಕಾರ್ಯಕ್ರಮದಲ್ಲಿ ಮರ್ಕಝ್ ಕಾಲೇಜು ಆಡಳಿತ ಸಮಿತಿಯ ಕಾರ್ಯದರ್ಶಿಯಾದ ಬಶೀರ್ ಹಾಜಿ, ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ,ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕಿಂಡರ್ ಗಾರ್ಟನ್ ಶಿಕ್ಷಕಿಯಾದ ಕುಮಾರಿ ಇಸ್ಫಾನ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶಿಕ್ಷಕಿಯಾದ ಕುಮಾರಿ ಸುನೈನಾ ವಂದಿಸಿದರು.