ಕರಾವಳಿಜಿಲ್ಲೆರಾಜ್ಯ

ಬೂತಾನ್‌ನಿಂದ ಅಡಿಕೆ ಆಮದು- ಅಡಿಕೆ ಬೆಳಗಾರ ಸಂಕಷ್ಟದಲ್ಲಿ
ಜಿಲ್ಲೆಯ ಜನರ ಬದುಕಿಗೆ ಕೊಳ್ಳಿ ಇಟ್ಟ ಮೋದಿ ಸರಕಾರ: ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ್


ಪುತ್ತೂರು: ಅಡಿಕೆಯನ್ನೇ ನಂಬಿ ಬದುಕುಕಟ್ಟಿಕೊಂಡ ದ ಕ ಮತ್ತು ಕರಾವಳಿ ಜಿಲ್ಲೆಗಳ ಜನರ ಬದುಕಿಗೆ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊಳ್ಳಿ ಇಟ್ಟಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಆರೋಪಿಸಿದ್ದಾರೆ.


2014 ರಿಂದ ಅಡಿಕೆ ಬೆಲೆ ಏರುತ್ತಲೇ ಬಂದಿದೆ ಇದಕ್ಕೆ ಕಾರಣ ಅಡಕೆ ಹೊರ ದೇಶದಿಂದ ಆಮದಾಗುವುದನ್ನು ತಡೆಯಲಾಗಿತ್ತು ಇದಕ್ಕೆ ಬೇರೆ ಕಾರಣಗಳಿತ್ತು. ದೇಶದಲ್ಲಿ ಬೆಳೆದ ಅಡಕೆ ದೇಶದಲ್ಲೇ ಬಳಕೆಯಗುತ್ತಿದೆ ಮತ್ತು ಸಾಕಾಗುತ್ತಿಲ್ಲ ಈ ಕಾರಣಕ್ಕೆ ಅಡಕೆಗೆ ದರ ಹೆಚ್ಚಾಗುತ್ತಲೇ ಹೋಗಿದೆ. ದೇಶದಲ್ಲಿ ಬೆಳೆದ ಅದರಲ್ಲೂ ಕರಾವಳಿ ಜಿಲ್ಲೆಯ ಅಡಿಕೆಗೆ ದೇಶದಲ್ಲಿ ಭಾರೀ ಬೇಡಿಕೆ ಇದೆ. ದ ಕ ಜಿಲ್ಲೆಯ ಜನರು ಅಡಕೆಯನ್ನೇ ನಂಬಿಕೊಂಡಿದ್ದಾರೆ ಆದರೆ ಅದನ್ನೂ ಕೇಂದ್ರದ ಬಿಜೆಪಿ ಸರಕಾರ ಮಣ್ಣು ಪಾಲು ಮಾಡಿದೆ. ಬೂತಾನ್ ದೇಶದಿಂದ ಅಡಿಕೆಯನ್ನು ಆಮದು ಮಾಡಿ ಗುಜರಾತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ಷಾ ಪುತ್ರ ಬ್ಯುಸಿನೆಸ್ ಮಾಡುತ್ತಿದ್ದಾರೆ. ವಿದೇಶದಿಂದ ಅಡಕೆ ತರಿಸಿ ದೇಶದಲ್ಲಿ ಬೆಳೆಯುವ ಅಡಕೆಗೆ ಬೇಡಿಕೆ ಕುಗ್ಗುವಂತೆ ಮಾಡುವುದೇ ಅಮಿತ್‌ಷಾ ಪುತ್ರನ ಉದ್ದೇಶವಾಗಿದೆ ಇದರಿಂದ ಅಡಿಕೆ ಕೃಷಿಕರು ಪೂರ್ಣವಾಗಿ ಕೈಕಟ್ಟಿದಂತಾಗಲಿದೆ ಎಂದು ಹೇಳಿದರು.

2014 ರಲ್ಲಿ ಮಂಗಳೂರಿನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ವಿದೇಶದಿಂದ ಅಡಕೆಯನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದರು ಆದರೆ ಆ ಭರವಸೆ ಸುಳ್ಳಾಗಿದೆ. ಅಡಕೆ ಕೃಷಿಕರು ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗಿ ಬರಬಹುದು ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!