ಶೇಖ್ ಮುಜೀಬುರ್ರಹಮಾನ್ ಸ್ಮಾರಕ ಮ್ಯೂಸಿಯಂ ಮೇಲೆ ದಾಳಿ
ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಫೇಸ್ಬುಕ್ ಲೈವ್ ಭಾಷಣದ ವೇಳೆ ಇಲ್ಲಿನ ಶೇಖ್ ಮುಜೀಬುರ್ರಹಮಾನ್ ಸ್ಮಾರಕ ಮ್ಯೂಸಿಯಂ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.

ರಾತ್ರಿ 8 ಗಂಟೆಯ ಸುಮಾರಿಗೆ ಪ್ರತಿಭಟನಾಕಾರರು ಮ್ಯೂಸಿಯಂ ಆವರಣವನ್ನು ಪ್ರವೇಶಿಸಿ ವಸ್ತುಸಂಗ್ರಹಾಲಯವನ್ನು ಧ್ವಂಸಗೊಳಿಸಿದರು. ಅವಾಮಿ ಲೀಗ್ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು ಎನ್ನಲಾಗಿದೆ.
ರಾಜಧಾನಿಯ ಧನ್ಮೊಂಡಿ ಪ್ರದೇಶದಲ್ಲಿರುವ ಮನೆಯ ಮುಂದೆ ಜಮಾಯಿಸಿದ ಸಾವಿರಾರು ಮಂದಿ, ಉದ್ದೇಶಿತ ಭಾಷಣದ ವಿರುದ್ಧ ಬುಲ್ಡೋಜರ್ ಮೆರವಣಿಗೆ ನಡೆಸಿದರು. ಇದೀಗ ವಿಸರ್ಜನೆಗೊಂಡಿರುವ ಅವಾಮಿ ಲೀಗ್ ನ ವಿದ್ಯಾರ್ಥಿ ಘಟಕ ಛಾತ್ರಾ ಲೀಗ್ ಮೂಲಕ ಹಸೀನಾ ಭಾಷಣ ಆಯೋಜಿಸಲಾಗಿತ್ತು.