ಅಂತಾರಾಷ್ಟ್ರೀಯಕ್ರೈಂ

ತರಬೇತುದಾರನ ಮೇಲೆಯೇ  ಭೀಕರ ದಾಳಿ ನಡೆಸಿದ ಕರಡಿ





ಕರಡಿಯೊಂದು ತನ್ನ ತರಬೇತುದಾರನ ಮೇಲೆಯೇ ದಾಳಿ ಮಾಡಿದ ಘಟನೆ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್‌ಝೌ ಸಫಾರಿ ಪಾರ್ಕ್‌ನಲ್ಲಿ  ನಡೆದಿದ್ದು, ತನ್ನ ಮೊದಲ ಪ್ರದರ್ಶನದ ಬಳಿಕ ಕಪ್ಪು ಕರಡಿ ತನ್ನ ತರಬೇತುದಾರನ ಮೇಲೆಯೇ ದಾಳಿ ಮಾಡಿದೆ.

ಈ ವೇಳೆ ಅಲ್ಲಿಯೇ ಇದ್ದ ಇತರೆ ತರಬೇತುದಾರರು ಕರಡಿಯನ್ನು ತಡೆಯಲು ಯತ್ನಿಸಿದ್ದಾರೆ. ತಮ್ಮ ಕೈಯಲ್ಲಿದ್ದ ಪರಿಕರಗಳಿಂದ ಕರಡಿಯನ್ನು ಬಲವಂತವಾಗಿ ಬೇರ್ಪಡಿಸಲು ಯತ್ನಿಸಿದರು. ಈ ವೇಳೆ ಕರಡಿ ದಾಳಿ ಮುಂದುವರೆದ ಕಾರಣ ಸಿಬ್ಬಂದಿ ಬಲಪ್ರಯೋಗ ಮಾಡಿ ಕರಡಿ ಮೇಲೆ ಹಲ್ಲೆ ಮಾಡಿ ಬೇರ್ಪಡಿಸಿದ್ದಾರೆ ಎನ್ನಲಾಗಿದೆ.


ಕರಡಿ ದಾಳಿ ವೇಳೆ ಅಲ್ಲಿದ್ದ ಪ್ರವಾಸಿಗರು ಘಟನೆಯ ಕಂಡು ಆತಂಕ ಭಯಗೊಂಡಿದ್ದರು. ಅಲ್ಲದೆ ಸಿಬ್ಬಂದಿಗಳು ಕೂಡಲೇ ಪ್ರವಾಸಿಗರನ್ನು ದೂರ ಸರಿಸಿದ್ದಾರೆ. ಬಳಿಕ ಕರಡಿಯನ್ನು ಸಿಬ್ಬಂದಿ ಎಳೆದೊಯ್ದಿದ್ದಾರೆ ಮತ್ತು ದಾಳಿಗೊಳಗಾದ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!