ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಿಂದೂ-ಮುಸ್ಲಿಂ ಜಗಳವನ್ನೇ ಬ್ಯಾನ್ ಮಾಡ್ತೀವಿ- ಸಿಎಂ ಇಬ್ರಾಹಿಂ
ಕಲಬುರಗಿ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಿಂದೂ –ಮುಸ್ಲಿಂ ಎನ್ನುವ ಜಗಳವನ್ನೇ ಬ್ಯಾನ್ ಮಾಡುವುದಾಗಿ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

ಅಫ್ಜಲ್ಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಶಿವಕುಮಾರ್ ನಾಟೀಕರ್ ಆರಂಭಿಸಿರುವ 500 ಕಿ.ಮೀ ಪಾದಯಾತ್ರೆಗೆ ಚಾಲನೆ ನೀಡುವ ಮುನ್ನ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಮ್ಮ ಪಕ್ಷವನ್ನು ಅಧಿಕಾರಕ್ಕೆ ಬಂದರೆ ಇಂತಹ ಹಿಂದೂ- ಮುಸ್ಲಿಂ ಜಗಳಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಹಿಂದೂ-ಮುಸ್ಲಿಂ ಜಗಳವನ್ನೇ ಬ್ಯಾನ್ ಮಾಡಲಾಗುವುದು ಎಂದು ಅವರು ತಿಳಿಸಿದರು.