ಕರಾವಳಿ

ರಫೀಕ್ ಮಾಸ್ಟರ್ ಅವರಿಗೆ ವಾಫಿಯಾ ಕಾಲೇಜು ವತಿಯಿಂದ ಸನ್ಮಾನ


ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಪ್ರೇರಣಾತ್ಮಕ ಭಾಷಣಕಾರರು ಹಾಗೂ ಶೈಕ್ಷಣಿಕ ಸಮಾಲೋಚಕರಾದ ರಫೀಕ್ ಮಾಸ್ಟರ್ ಅವರನ್ನು ಕೂರ್ನಡ್ಕ ವಾಫಿಯಾ ಕಾಲೇಜಿನ ಆಡಳಿತ ಸಮಿತಿಯ ವತಿಯಿಂದ  ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.



ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಫಿಯಾ ಕಾಲೇಜಿನ ಅಧ್ಯಕ್ಷರಾದ ಕೆ.ಎಂ. ಅಬ್ದುಲ್ ಖಾದರ್ ಅವರು ರಫೀಕ್ ಮಾಸ್ಟರ್ ಅವರ ಶೈಕ್ಷಣಿಕ, ಸಾಮಾಜಿಕ ಹಾಗೂ ಪ್ರೇರಣಾತ್ಮಕ ಸೇವೆಗಳನ್ನು ವಿವರವಾಗಿ ಪರಿಚಯಿಸಿ, ಅವರ ಸಾಧನೆಗಳನ್ನು ಶ್ಲಾಘಿಸಿದರು.


ಕಾರ್ಯಕ್ರಮದಲ್ಲಿ ಜಮಾಅತ್ ಸಮಿತಿಯ ಕೋಶಾಧಿಕಾರಿ ಹಾಗೂ ವಾಫಿಯಾ ಕಾಲೇಜಿನ ಸದಸ್ಯರಾದ ಎಲ್.ಟಿ. ಉಮರ್ ಫಾರೂಕ್, ಉಪಾಧ್ಯಕ್ಷ ಹನೀಫ್ ಮಧುರ, ಉಪಪ್ರಾಂಶುಪಾಲ ಅಬ್ದುಲ್ ಬಾಸಿತ್ ಹುದವಿ, ಮ್ಯಾನೇಜರ್ ಇಸ್ಮಾಯಿಲ್ ದಾರಿಮಿ, ಸಿಬ್ಬಂದಿ ಸಲಾಂ ಫೈಝಿ, ಸದಸ್ಯ ಇಸ್ಮಾಯಿಲ್ ಕೆನರಾ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!