ಗಾಝಾ: ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಸಚಿವ ಸಂಪುಟ ಒಪ್ಪಿಗೆ
ಹಮಾಸ್ ಜೊತೆಗಿನ ಗಾಝಾ ಕದನ ವಿರಾಮ ಒಪ್ಪಂದದ ನಿಗದಿತ ಆರಂಭಕ್ಕೆ ಒಂದು ದಿನ ಮುಂಚಿತವಾಗಿ, ಒಪ್ಪಂದಕ್ಕೆ ಇಸ್ರೇಲ್ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಮೂಲಗಳು ತಿಳಿಸಿದೆ.
ಶನಿವಾರ ಮುಂಜಾನೆ ಆರು ಗಂಟೆಗಳಿಗೂ ಹೆಚ್ಚು ಕಾಲ ಸಭೆ ನಡೆಸಿದ ನಂತರ, ಹಮಾಸ್ ನಿಯಂತ್ರಣದಲ್ಲಿರುವ ಫೆಲೆಸ್ತೀನ್ ಪ್ರದೇಶದಲ್ಲಿ 15 ತಿಂಗಳಿನಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದವನ್ನು ಸರ್ಕಾರ ಅಂಗೀಕರಿಸಿತು.
“ಒತ್ತೆಯಾಳುಗಳ ಮರಳುವಿಕೆಗೆ ಸರ್ಕಾರ ಕದನ ವಿರಾಮವನ್ನು ಅನುಮೋದಿಸಿದೆ. ಒತ್ತೆಯಾಳುಗಳ ಬಿಡುಗಡೆ ರವಿವಾರದಿಂದ ಜಾರಿಗೆ ಬರಲಿದೆ” ಎಂದು ನೆತನ್ಯಾಹು ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.