ನಾನು ರಾಜಕೀಯ ನಿವೃತ್ತಿ ಘೋಷಿಸಿಲ್ಲ: ಹರೀಶ್ ಕುಮಾರ್
ಮಂಗಳೂರು: ನಾನು ರಾಜಕೀಯ ನಿವೃತ್ತಿ ನೀಡಿಲ್ಲ, ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ” ಎಂದು ವಿಧಾನ ಪರಿಷತ್ ಸದಸ್ಯ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಹರೀಶ್ ಕುಮಾರ್ ರಾಜೀನಾಮೆ ನೀಡಿದ್ದಾಗಿ ಕೆಲವು ವೆಬ್‌ಸೈಟ್‌ಗಳಲ್ಲಿ ಸುದ್ದಿ ಪ್ರಕಟಗೊಂಡಿತ್ತು.
ಏಳು ವರ್ಷ ಏಳು ತಿಂಗಳಿನಿಂದ ಅಧ್ಯಕ್ಷನಾಗಿದ್ದೇನೆ. ಯಾರ ಹೆಸರನ್ನು ಹೈಕಮಾಂಡ್ ಪ್ರಕಟಿಸುತ್ತದೋ ಆಗಲೇ ನಾನು ಅಧ್ಯಕ್ಷ ಹುದ್ದೆ ಹಸ್ತಾಂತರಿಸುತ್ತೇನೆ. ರಾಜಕೀಯ ನಿವೃತ್ತಿಯ ವಿಷಯವೇ ಬಂದಿಲ್ಲ ಎಂದರು.