ಕತ್ತಲಾಗುತ್ತಲೇ ಬೆತ್ತಲಾಗುವ ಅಸಾಮಿ…!
ಇವನಿಗೆ ಅದೇನು ರೋಗವೋ ಗೊತ್ತಿಲ್ಲ ಸೂರ್ಯ ಮುಳುಗಿದರೆ ಸಾಕು ಇವನು ತಾನು ಹಾಕಿದ್ದ ಬಟ್ಟೆಯನ್ನೆಲ್ಲಾ ಕಳಚಿ ಕತ್ತಲಲ್ಲಿ ಬೆತ್ತಲೆಯಾಗಿ ನಡೆಯುವ ಅಭ್ಯಾಸವನ್ನು ರೂಡಿಸಿಕೊಂಡಿದ್ದ 25 ರ ಹರೆಯದ ಯುವಕನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಬೆಟ್ಟ ಹಲಸೂರು ಗ್ರಾಮದಲ್ಲಿ ಈ ಯುವಕನ ಬಂಧ ನಡೆದಿದೆ.

ಕತ್ತಲೆಯಲ್ಲಿ ಬೆತ್ತಲೆಯಾಗುವುದೇ ಈತನ ವಿಕೃತವಾಗಿತ್ತು. ಬೆತ್ತಲೆಯಾಗಿಯೇ ಮನೆಗಳಿಗೆ ಕಳ್ಳತನಕ್ಕೆ ಹೋಗುತ್ತಿದ್ದ ಈತ ಅನೇಕ ಮನೆಗಳಿಂದ ಕಳವು ಕೃತ್ಯ ನಡೆಸಿದ್ದ. ತಲೆಯ ಮೇಲೊಂದು ಟಾರ್ಚನ್ನು ಕಟ್ಟಿಕೊಂಡು ಬೇಟೆಗೆ ಹೋಗುವ ರೀತಿಯಲ್ಲಿ ಕಳ್ಳತನಕ್ಕೆ ಹೋಗುತ್ತಿದ್ದ. ಮನೆಯೊಂದಕ್ಕೆ ಕಳ್ಳತನ ಮಾಡಲು ತೆರಳುತ್ತಿದ್ದ ನಾಯಿ ಜೋರಾಗಿ ಬೊಗಳಿದ್ದು ಮನೆಯವರು ಬಂದು ನೋಡಿದಾಗ ಬೆತ್ತಲೆಯಗಿ ಯವಕನೋರ್ವ ಓಡಿ ಹೋಗುತ್ತಿದ್ದ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಗ್ರಾಮಸ್ಥರು ಆರೋಪಿಯನ್ನು ಪೊಲೀಸರ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಆತನಿಗೆ ಬಟ್ಟೆ ತೊಡಿಸಿ ಠಾಣೆಗೆ ಕೊಂಡೊಯ್ದಿದ್ದಾರೆ.