ಗ್ರಾ.ಪಂ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೆಲ್ವಿನ್ ಮೊಂತೆರೋಗೆ ಭಾರತ್ ವೆಹಿಕಲ್ ಬಜಾರ್ ವತಿಯಿಂದ ಗೌರವಾರ್ಪಣೆ
ಪುತ್ತೂರು: ಭಾರತ್ ವೆಹಿಕಲ್ ಬಜಾರ್ ಸಂಸ್ಥೆ 2ನೇ ವರ್ಷಕ್ಕೆ ಪದಾರ್ಪಣೆ ಹಾಗೂ ಸಂಸ್ಥೆ ಸ್ಥಳಾಂತರಗೊಂಡು ನೇರಳಕಟ್ಟೆಯಲ್ಲಿ ಶುಭಾರಂಭಗೊಂಡ ಪ್ರಯುಕ್ತ ಡಿ.8ರಂದು ವಿವಿಧ ಕಾರ್ಯಕ್ರಮ ನಡೆಯಿತು.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿ ಕೆದಂಬಾಡಿ ಗ್ರಾ.ಪಂ ಸದಸ್ಯರಾಗಿ ಆಯ್ಕೆಗೊಂಡಿರುವ ಮೆಲ್ವಿನ್ ಮೊಂತೆರೋ ಅವರನ್ನು ಭಾರತ್ ವೆಹಿಕಲ್ ಬಜಾರ್ ನ ಮಾಲಕ ಅಶ್ರಫ್ ತಿಂಗಳಾಡಿಯವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.