ನೇರಳಕಟ್ಟೆ: ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ಶುಭಾರಂಭ; ಡ್ರಗ್ಸ್ ವಿರುದ್ದ ಜನಜಾಗೃತಿ
ಪುತ್ತೂರು: ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು, ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿ ಶುಭಾರಂಭ ಹಾಗೂ ಭಾರತ್ ವೆಹಿಕಲ್ ಬಜಾರ್ ಸಂಸ್ಥೆ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ 2ನೇ ವರ್ಷಾಚರಣೆ ಹಾಗೂ ಐಕ್ಯ ವೇದಿಕೆ ಕೊಡಾಜೆ ಇದರ ಜಂಟಿ ಸಹಭಾಗಿತ್ವದಲ್ಲಿ ಡ್ರಗ್ಸ್ ವಿರುದ್ದ ಜನಜಾಗೃತಿ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕಾರ್ಯಕ್ರಮ ಡಿ.8ರಂದು ನಡೆಯಿತು.
ಬೆಳಿಗ್ಗೆ ಸಯ್ಯದ್ ಹಂಝ ತಂಙಳ್ ಅವರು ಶೋರೂಂ ಉದ್ಘಾಟಿಸಿ ಶುಭ ಹಾರೈಸಿದರು. ಕೊಡಾಜೆ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಪ್ರಾರ್ಥಿಸಿದರು.
ಸಾಬುಚ್ಚ ತಿಂಗಳಾಡಿ, ಹಾರಿಸ್ ಮುಸ್ಲಿಯಾರ್, ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ, ಪ್ರಮುಖರಾದ ಹಮೀದ್ ಪರ್ಲೊಟ್ಟು, ಅಬ್ದುಲ್ ಖಾದರ್ ಕಬಕ, ಶರೀಫ್ ಸೂರ್ಯ, ಆಸಿಫ್ ಬೋಳಂತೂರು, ಇಬ್ರಾಹಿಂ ಎಸ್‌ಎಂಎಸ್, ಸಲೀಂ ಪರ್ಲೊಟ್ಟು ಉಪಸ್ಥಿತರಿದ್ದರು. ಪ್ರಥಮ ಕಾರು ಖರೀದಿದಾರರಾದ ಜಾಫರ್ ಸಾದಿಕ್ ಅರ್ಷದಿ ಅವರಿಗೆ ಪಾಟ್ರಕೋಡಿ ತಂಙಳ್ ಕಾರಿನ ಕೀ ಹಸ್ತಾಂತರಿಸಿದರು. ಭಾರತ್ ವೆಹಿಕಲ್ ಬಜಾರ್‌ನ ಮಾಲಕ ಅಶ್ರಫ್ ತಿಂಗಳಾಡಿ ಸ್ವಾಗತಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಡ್ರಗ್ಸ್ ವಿರುದ್ದ ಜನಜಾಗೃತಿ, ಸಭಾ ಕಾರ್ಯಕ್ರಮ, ಸನ್ಮಾನ: ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಉದ್ಯಮಗಳು ಹೆಚ್ಚಾದಂತೆ ನಾಡು ಅಭಿವೃದ್ಧಿ ಹೊಂದುತ್ತದೆ, ಭಾರತ್ ವೆಹಿಕಲ್ ಬಜಾರ್ ಎತ್ತರಕ್ಕೆ ಬೆಳೆಯಲ್ಲಿ ಎಂದು ಶುಭ ಹಾರೈಸಿದರು.
ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಮಾತನಾಡಿ ಭಾರತ್ ವೆಹಿಕಲ್ ಬಜಾರ್ ಸಂಸ್ಥೆಯು ಗುಣ ಮಟ್ಟದ ವ್ಯವಹಾರದ ಮೂಲಕ ಗುರುತಿಸಿಕೊಂಡಿದ್ದು ಒಂದನೇ ವರ್ಷಾಚರಣೆಯನ್ನು ಯಶಸ್ವಿಯಾಗಿ ಆಚರಿಸಿಕೊಂಡಿದೆ ಎಂದು ಪ್ರಶಂಶಿಸಿದರು.
ಕಲ್ಲಡ್ಕ ಮಸೀದಿಯ ಕಾರ್ಯದರ್ಶಿ ಸಿದ್ದೀಕ್ ಪನಾಮ ಮತ್ತು ಬಂಟ್ವಾಳ ಮುಸ್ಲಿಂ ಸಮಾಜದ ಪ್ರ.ಕಾರ್ಯದರ್ಶಿ ಹನೀಫ್ ಖಾನ್ ಕೊಡಾಜೆಯವರು ಡ್ರಗ್ಸ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಭಾಷಣ ನಡೆಸಿದರು.
ಬೆಂಗಳೂರು ಎಚ್‌ಎಂಎಸ್ ಗ್ರೂಪ್‌ನ ಚೇರ್‌ಮೆನ್ ಹರೀಶ್ ಎಂ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆದಂಬಾಡಿ ಗ್ರಾ.ಪಂ ಸದಸ್ಯ ಮೆಲ್ವಿನ್ ಮೊಂತೆರೋ ಅವರನ್ನು ಸಂಸ್ಥೆಯ ಮಾಲಕ ಅಶ್ರಫ್ ತಿಂಗಳಾಡಿ ನೇತೃತ್ವದಲ್ಲಿ ಗೌರವಿಸಲಾಯಿತು.
ಮಾಣಿ ಗ್ರಾ.ಪಂ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ತುಮಕೂರು ಎಚ್‌ಎಂಎಸ್ ಗ್ರೂಪ್‌ನ ಸುರೇಶ್ ಕುಮಾರ್, ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಉದ್ಯಮಿಗಳಾದ ಶಾಹುಲ್ ಹಮೀದ್ ಕೊಜಂಬಾಡಿ, ಸಂತೋಷ್ ಶೆಟ್ಟಿ, ಅನ್ವರ್ ಸ್ಪೋರ್ಟ್ಸ್, ಹಿದಾಯತ್ ಕಣ್ಣೂರು, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ದೀಪಕ್ ಆಳ್ವ, ಅಬ್ಬಾಸ್ ಅಲಿ ಬಂಟ್ವಾಳ, ಐಕ್ಯ ವೇದಿಕೆಯ ಸಲಹೆಗಾರ ರಜಾಕ್ ಅನಂತಾಡಿ, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಧನಂಜಯ ಗೌಡ, ನೇರಳಕಟ್ಟೆ ವ್ಯ.ಸೇ.ಸ.ಸಂಘದ ನಿರ್ದೇಶಕ ನಿರಂಜನ್ ರೈ, ನೇರಳಕಟ್ಟೆ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಶೀದ್ ಪರ್ಲೊಟ್ಟು, ಪ್ರಮುಖರಾದ ಹನೀಫ್ ಬಗ್ಗುಮೂಲೆ, ಅಬ್ಬಾಸ್ ಕಲಂದರಿಯ, ಝಕರಿಯಾ ಕಲ್ಲಡ್ಕ, ಭಾರತ್ ವೆಹಿಕಲ್ ಬಜಾರ್‌ನ ಸ್ಟಾರ್ ಪ್ರಚಾರಕಿ ಕು.ಶ್ರೇಯಾ ಉಪಸ್ಥಿತರಿದ್ದು ಶುಭ ಹಾರೈಸಿದರು.
ಭಾರತ್ ವೆಹಿಕಲ್ ಬಜಾರ್‌ನ ಮಾಲಕ ಅಶ್ರಫ್ ತಿಂಗಳಾಡಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಪತ್ರಕರ್ತ ಲತೀಫ್ ನೇರಳಕಟ್ಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಮೀದ್ ಕಲ್ಲಡ್ಕ ಮತ್ತು ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ಭಾರತ್ ವೆಹಿಕಲ್ ಬಜಾರ್‌ನ ಸಿಬ್ಬಂದಿಗಳು, ಕೊಡಾಜೆ ಐಕ್ಯ ವೇದಿಕೆಯ ಸದಸ್ಯರು ಸಹಕರಿಸಿದರು.
ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಆಳ್ವ ಅನಂತಾಡಿ, ಪ್ರಾಚ್ಯ ಪಚ್ಚೆ ವನಸಿರಿ ವೈದ್ಯರತ್ನ ಪ್ರಶಸ್ತಿ ಪುರಸ್ಕೃತ ಪಂಡಿತ ಗಂಗಾಧರ ಕರಿಯ ಅನಂತಾಡಿ, ಪ್ರೌಢ ಶಾಲಾ ವಿಭಾಗದ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಪುನೀತ್ ಗೋಳಿಕಟ್ಟೆ ಅನಂತಾಡಿ, ೧೭ ವರ್ಷದ ವಯೋಮಿತಿಯ ವಾಲಿಬಾಲ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕೌಶಿಕ್ ಹೆಚ್ ಶೆಟ್ಟಿ ವಿಜಯನಗರ ಮಾವಿನಕಟ್ಟೆ, ಪ್ರೌಢ ಶಾಲಾ ವಿಭಾಗದ ಲಾಂಗ್ ಜಂಪ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಹಮ್ಮದ್ ಫೌಝನ್ ಪಾಟ್ರಕೋಡಿ ಮೊದಲಾದವರನ್ನು ಸನ್ಮಾನಿಸಲಾಯಿತು.
ಮನರಂಜಿಸಿದ ರಸಮಂಜರಿ ಕಾರ್ಯಕ್ರಮ: ಕೊನೆಯಲ್ಲಿ ಖಾಫಿಲಾ ಆರ್ಕೆಸ್ಟ್ರಾ ಕಾಸರಗೋಡು ಬಳಗದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ನೂರಾರು ಮಂದಿ ಭಾಗವಹಿಸಿದ್ದರು.