WIM ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ನೌರೀನ್ ಆಲಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಝಹಿದ ಸಾಗರ್ ಆಯ್ಕೆ
ಮಂಗಳೂರು: SDPI ಪಕ್ಷದ ಮಹಿಳಾ ಘಟಕದವಾದ ವಿಮೆನ್ ಇಂಡಿಯಾ ಮೂವ್ಮೆಂಟ್ ಇದರ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆಯಾಗಿ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯೆ ನೌರೀನ್ ಆಲಂಪಾಡಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಝಹಿದಾ ಸಾಗರ್ ಆಯ್ಕೆಯಾಗಿದ್ದಾರೆ.

ಜಿಲ್ಲಾ ಉಪಾಧ್ಯಕ್ಷೆಯಾಗಿ ಝಹನ ಬಂಟ್ವಳ, ಕಾರ್ಯದರ್ಶಿಯಾಗಿ ಝೈನಬ ಕವಳಕಟ್ಟೆ, ಕೋಶಾಧಿಕಾರಿಯಾಗಿ ಫಾಹಿನ ಉಪ್ಪಿನಂಗಡಿ ಹಾಗೂ ಸಮಿತಿ ಸದಸ್ಯರುಗಳಾಗಿ ಶೀನರ ಮತ್ತು ಮರಿಯಮ್ಮ ಟಿ.ಎಸ್ ಆಯ್ಕೆಯಾಗಿದ್ದಾರೆ.
ಮಂಗಳೂರು ಪುರಭವನದಲ್ಲಿ ಜನವರಿ ಏಳರಂದು ನಡೆದ SDPI ಪಕ್ಷದ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಪಕ್ಷದ ಆಡಳಿತಾತ್ಮಕ ಸುಲಭ ನಿರ್ವಹಣೆಯ ಉದ್ದೇಶದಿಂದ ಕಂದಾಯ ಜಿಲ್ಲೆಯನ್ನು ವಿಭಜಿಸಿ ಪಕ್ಷದ ಮಂಗಳೂರು ಗ್ರಾಮಾಂತರ ಮತ್ತು ಮಂಗಳೂರು ನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಅದೇ ಪ್ರಕಾರ ಮಹಿಳಾ ಘಟಕವನ್ನು ಎರಡಾಗಿ ವಿಂಗಡಿಸಿ ಪುತ್ತೂರು,ಬಂಟ್ವಾಳ,ಬೆಳ್ತಂಗಡಿ,ಸುಳ್ಯ ಕ್ಷೇತ್ರಗಳನ್ನು ಒಳಗೊಂಡ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ರಚಿಸಲಾಗಿದೆ. ವಿಮ್ ರಾಜ್ಯಾಧ್ಯಕ್ಷೆ ನಸೀಮಾ ಜೋಕಟ್ಟೆ ಮತ್ತು ರಾಜ್ಯಾ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.