ಅಮೆರಿಕ ಮೂಲದ ಮುಸ್ಲಿಂ ಯುವ ದಂಪತಿಗಳು ಹಿಂದೂ ಸಂಪ್ರದಾಯದಂತೆ ವಿವಾಹ!
ವಾರಣಾಸಿ: ಭಾರತಕ್ಕೆ ಭೇಟಿ ನೀಡಿದ ಅಮೆರಿಕ ಮೂಲದ ಯುವ ದಂಪತಿಗಳು ಭಾರತೀಯ ಸಂಸ್ಕೃತಿಯನ್ನು ಇಷ್ಟಪಟ್ಟಿದ್ದಾರೆ. ಅವರಿಬ್ಬರೂ ತ್ರಿಲೋಚನ್ ಮಹಾದೇವನ ದೇವಾಲಯದಲ್ಲಿ ಬಾಬಾ ಭೋಲೆನಾಥ್ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾದರು.
ಮದುವೆಗೂ ಮುನ್ನ ಇಬ್ಬರೂ ವಾರಣಾಸಿಯ ಜ್ಯೋತಿಷಿಯೊಬ್ಬರಿಂದ ಜಾತಕವನ್ನು ತಯಾರಿಸಿದ್ದರು. ಅಮೆರಿಕದ ಮುಸ್ಲಿಂ ಯುವಕ-ಯುವತಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಅಮೆರಿಕದ ಖಿಯಾಮಾ ದಿನ್ ಖಲೀಫಾ ಎಂಬ ಮುಸ್ಲಿಂ ಯುವಕ ತನ್ನ ಗೆಳತಿ ಕೇಶ ಖಲೀಫಾ ಅವರೊಂದಿಗೆ ಭಾರತಕ್ಕೆ ಭೇಟಿ ನೀಡಲು ಬಂದಿದ್ದಾನೆ. ಇಬ್ಬರೂ ವಾರಣಾಸಿಯ ಘಾಟ್ಗಳು, ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು.