ಸುಳ್ಯ: ಕೆ.ಎಸ್.ಆರ್.ಟಿ.ಸಿ ಬಸ್ – ಸ್ಕೂಟಿ ನಡುವೆ ಭೀಕರ ಅಪಘಾತ, ವಿದ್ಯಾರ್ಥಿನಿ ಮೃತ್ಯು
ಸುಳ್ಯ: ಉಬರಡ್ಕ ಗ್ರಾಮದ ಸೂಂತೋಡು ತಿರುವೊಂದರಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಸ್ಕೂಟಿ ಅಪಘಾತವಾಗಿ ಸಹೋದರಿಯರಿಬ್ಬರು ಗಂಭೀರ ಗಾಯಗೊಂಡಿದ್ದು, ಒಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.

ಇಂದು ಸಂಜೆ ಸುಳ್ಯದಿಂದ ಉಬರಡ್ಕಕ್ಕೆ ಸ್ಕೂಟಿಯಲ್ಲಿ ಕಾಡುತೋಟದ ಸಹೋದರಿಯರಾದ ರಚನಾ ಮತ್ತು ಅನನ್ಯ ತೆರಳುತಿದ್ದಾಗ, ಸೂಂತೋಡು ಬಳಿ ಎದುರಿನಿಂದ ಬಂದ ಬಸ್ ಪರಸ್ಪರ ಢಿಕ್ಕಿಯಾಯಿತು. ಪರಿಣಾಮ ರಚನಾ ಗಂಭೀರ ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಅನನ್ಯರ ಕಾಲಿಗೆ ಗಂಭೀರ ಗಾಯವಾಗಿದೆ. ರಚನಾ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.