ಕರಾವಳಿ

ಬಾಲವನ ಅಂಗನವಾಡಿ ಕಾರ್ಯಕರ್ತೆ ಗೀತಾ ಡಿ ಅವರಿಗೆ ಬೀಳ್ಕೊಡುಗೆ

ಪುತ್ತೂರು ಬಾಲವನ ಅಂಗನವಾಡಿ ಕೇಂದ್ರದಲ್ಲಿ 2001 ರಿಂದ 2024 ಅಕ್ಟೋಬರ್ 31ರ ವರೆಗೆ ಸೇವೆ ಮಾಡಿ ಸ್ಥಳಿಯ ಮನೆ ಮಂದಿಯ ಪ್ರೀತಿಗೆ ಪಾತ್ರರಾಗಿದ್ದ ಶ್ರೀಮತಿ ಗೀತಾ ಡಿ. ಇವರು ತಮ್ಮ 23 ವರ್ಷದ ಸೇವಾವಧಿಯನ್ನು ಮುಗಿಸಿದ್ದಾರೆ,

ಈ ಪ್ರಯುಕ್ತ ನವೆಂಬರ್ 05ರಂದು ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರ ಪರವಾಗಿ ಬಾಲವನ ಅಂಗನವಾಡಿಯಲ್ಲಿ ನಡೆದ ಶಹರ್ ರೋಜ್ಗಾರ್ ಸಂಘದವರ ಮಾಸಿಕ ಸಭೆಯ ಕಾರ್ಯಕ್ರಮದಲ್ಲಿ ಪೇಟ ತೋಡಿಸಿ ಏಲಕ್ಕಿ ಹಾರ ಹಾಕಿ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಹರ್ ರೋಜ್ಗಾರ್ ಸಂಘದವರಿಂದಲೂ ಶಾಲು ಹೊದಿಸಿ ಹಣ್ಣು ಹಂಪಲು ನೀಡಿ ಸನ್ಮಾನಿಸಲಾಯಿತು. ಬಪ್ಪಳಿಗೆ ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಕಿರು ಕಾಣಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷ ಸೇವೆ ಸಲ್ಲಿಸಿ ಬೇರೆ ಅಂಗನವಾಡಿಗೆ ವರ್ಗಾವಣೆಗೊಂಡ ಸುಮಾ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.  ಅಥಿತಿಗಳಾಗಿ ರೋಟರಿ ಜಿಲ್ಲೆ 3181 ಝೊನ್ 5ರ ವಲಯ ಸೇನಾನಿಯೂ ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರೂ ಆದ ಸ್ಥಳಿಯ ನಿವಾಸಿ ರಫೀಕ್ ದರ್ಬೆ, ನ್ಯಾಯವಾದಿ ಗ್ರೆಗೋರಿ ಡಿಸೋಜ,
ಬಪ್ಪಳಿಗೆ ಅಂಗನವಾಡಿ ಕಾರ್ಯಕರ್ತೆ ಸುಮಿತ್ರ, ಸ್ಥಳೀಯ ಆಶಾ ಕಾರ್ಯಕರ್ತೆ ಚಂದ್ರಾವತಿ, ಬಾಲವಿಕಾಸ ಸಮಿತಿ ಬಾಲವನ ಅಂಗನವಾಡಿ ಅಧ್ಯಕ್ಷೆ ಆಯಿಶಾ, ಮಕ್ಕಳ ಪೋಷಕರಾದ ಝಯಾನ್ ಪರ್ಲಡ್ಕ,
ಶಹರ್ ರೋಜ್ಗಾರ್, ಅಧ್ಯಕ್ಷರಾದ ಪ್ರಭಾವತಿ ಮತ್ತು ಜಾನಕಿ ಹಾಗೂ ಮಕ್ಕಳ ತಾಯಂದಿರು ಉಪಸ್ಥಿತರಿದ್ದರು. ನೂತನ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!