ಕರಾವಳಿ

ಎಸ್.ವೈ.ಎಸ್ ಪುತ್ತೂರು ಝೋನ್’ನಿಂದ ಲೈನ್’ಮ್ಯಾನ್ ಗಳಿಗೆ, ಆಂಬ್ಯುಲೆನ್ಸ್ ಚಾಲಕರಿಗೆ ಸನ್ಮಾನ, ಬಡ ರೋಗಿಗಳಿಗೆ ಊಟದ ಕಿಟ್ ವಿತರಣೆ

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈಎಸ್ ) ಪುತ್ತೂರು ಝೋನ್ ವ್ಯಾಪ್ತಿಯಲ್ಲಿ ಬರುವ ಏಳು ಸರ್ಕಲ್ ಗಳ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಮಾಣಿ ಶೇರ ಬುಡೋಳಿಯಲ್ಲಿ ಲೈನ್ ಮ್ಯಾನ್ ಗಳಾದ ಮುತ್ತುರಾಜ, ರವಿ ಹಾಗೂ ಆಂಬ್ಯುಲೆನ್ಸ್ ಡ್ರೈವರ್ ಗಳಾದ ಶಂಶೀರ್ ಶೇರಾ, ಅಶ್ರಫ್, ಮನೋಹರ್, ಪುತ್ತೂರು ಸರ್ಕಲ್ ಬನ್ನೂರಿನಲ್ಲಿ ಲೈನ್ ಮ್ಯಾನ್ ಗಳಾದ ಸಂತೋಷ್, ಪೂವಪ್ಪ , ಆಂಬ್ಯುಲೆನ್ಸ್ ಡ್ರೈವರ್ ಗಳಾದ ನಾಗೇಶ್, ರಝಾಕ್, ಉವೈಸ್, ಕಬಕ ಸರ್ಕಲ್ ನಲ್ಲಿ ಲೈನ್ ಮ್ಯಾನ್ ಗಳಾದ ರವಿ ವಾಲ್ಟರ್, ಆದಿ, ರವಿಮಣಿ, ಸಂತೋಷ್, ಈಶ್ವರಮಂಗಲ ಸರ್ಕಲ್ ತೈಬಾ ಸೆಂಟರ್ ನಲ್ಲಿ ರಮೇಶ್.ಕೆ (ಜೆ.ಇ), ಕೇಶವ. ಪಿ (ಮೀಟರ್ ರೀಡರ್), ನಾಗೇಶ.ಕೆ ಎಸ್(ಮೆಕ್ಯಾನಿಕ್ ದರ್ಜೆ)
ಗಂಗಾಧರ.ಬಿ(ಪವರ್ ಮ್ಯಾನ್)
ದಿತೀಶ್ ಎಸ್(ಪವರ್ ಮ್ಯಾನ್)
ಪಾಂಡಪ್ಪ ದೊಡಮನಿ(ಸಹಾಯಕ ಪವರ್ ಮ್ಯಾನ್)
ಆರ್ ಕಿರಣ್(ಸಹಾಯಕ ಪವರ್ ಮ್ಯಾನ್)
ರಫೀಕ್ ಅಕ್ಕೋಜಿ(ಕಿರಿಯ ಪವರ್ ಮ್ಯಾನ್)
ಸಂಪತ್ ಕುಮಾರ್ ಆರ್ ಸಂಗಟಿ(ಕಿರಿಯ ಪವರ್ ಮ್ಯಾನ್), ದರ್ಶನ್ ಹಿಪ್ಪರಗಿ(ಕಿರಿಯ ಪವರ್ ಮ್ಯಾನ್) ಬಂದೇನವಾಜ (ಹಿರಿಯ ಪವರ್ ಮ್ಯಾನ್)
ಹನಮಂತ ದಾಸರ (ಸಹಾಯಕ ಪವರ್ ಮ್ಯಾನ್), ಶರಣು ಎಂ ಛಲವಾದಿ(ಸಹಾಯಕ ಪವರ್ ಮ್ಯಾನ್) ಚೈತನ್ ಬನ್ನಿಕೊಪ್ಪ (ಜೂನಿಯರ್ ಪವರ್ ಮ್ಯಾನ್), ಆಂಬ್ಯುಲೆನ್ಸ್ ಡ್ರೈವರ್ ಗಳಾದ ಹನೀಫ್ ಸಿಲ್ಸಿಲಾ, ಮುಹಮ್ಮದ್ ರಿಯಾಝ್ ಕೊಟ್ಯಾಡಿ ಮೊದಲಾದವರಿಗೆ ಗೌರವಾರ್ಪಣೆ ಮಾಡಲಾಯಿತು.

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಬಡ ರೋಗಿಗಳಿಗೆ ಹಾಗೂ ಬಿಕ್ಷುಕರಿಗೆ ಊಟದ ಕಿಟ್ ವಿತರಿಸಲಾಯಿತು. ಎಸ್ ವೈಎಸ್ ರಾಜ್ಯ ಸಮಿತಿಯು ದೇರಳಕಟ್ಟೆಯಲ್ಲಿ ನಿರ್ಮಿಸುತ್ತಿರುವ ಸ್ವಾಂತ್ವನ ಭವನಕ್ಕೆ ಐವತ್ತು ಸಾವಿರ ರೂಪಾಯಿ ಸಾಂತ್ವನ ಫಂಡ್ ಹಸ್ತಾಂತರ ಮಾಡಲಾಯಿತು.

ಝೋನ್ ಅಧ್ಯಕ್ಷ ಅಬೂ ಶಝ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಬ್ದುಲ್ಲ ಮುಸ್ಲಿಯಾರ್ ಬನ್ನೂರು ಉದ್ಘಾಟಿಸಿ ಮಾತನಾಡಿದರು. ಎಸ್ ವೈಎಸ್ ರಾಜ್ಯಾಧ್ಯಕ್ಷ ಎಂ ವೈ ಹಫೀಳ್ ಸಅದಿ ಕೊಡಗು ಸಂದೇಶ ಭಾಷಣ ಮಾಡಿದರು. ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ನಾಯಕ ಇಕ್ಬಾಲ್ ಬಪ್ಪಳಿಗೆ, ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ ಸಾಂದರ್ಭಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ಮಜೀದ್ ಬನ್ನೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಮೀದ್ ಕೊಯಿಲ, ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಅಝೀಝ್ ಚೆನ್ನಾರ್, ಕುಂಬ್ರ ಸರ್ಕಲ್ ಕಾರ್ಯದರ್ಶಿ ಶಮೀರ್ ಸಖಾಫಿ ರೆಂಜಲಾಡಿ, ಮಾಣಿ ಸರ್ಕಲ್ ಅಧ್ಯಕ್ಷ ಹೈದರ್ ಸಖಾಫಿ ಬುಡೋಳಿ,ಕಬಕ ಸರ್ಕಲ್ ಸಿದ್ದೀಕ್ ಹಾಜಿ ಕಬಕ, ಶಾಹುಲ್ ಹಮೀದ್ ಕಬಕ, ಮಾಡಾವು ಸರ್ಕಲ್ ಉಪಾಧ್ಯಕ್ಷ ಫವಾಝ್ ಕಟ್ಟತ್ತಾರು, ಶಮೀರ್ ಕೊಡಿಪ್ಪಾಡಿ, ಪುತ್ತೂರು ಸರ್ಕಲ್ ಅಧ್ಯಕ್ಷ ಶಮೀರ್ ಬನ್ನೂರು, ಫಾರೂಕ್ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು. ಝೋನ್ ಪ್ರ.ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ಕರ್ನೂರು ರವರು ಸ್ವಾಗತಿಸಿದರು. ಇಸಾಬಾ ಕಾರ್ಯದರ್ಶಿ ರಝಾಕ್ ಹಿಮಮಿ ರೆಂಜ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!